ಬಾಯಾರು ಆರೋಗ್ಯ ಕೇಂದ್ರದಲ್ಲಿ ಅವಧಿ ಮೀರಿದ ಔಷಧ ನೀಡಿಕೆ: ಸಿಪಿಎಂನಿಂದ ಪ್ರತಿಭಟನೆ

ಬಾಯಾರು: ಇಲ್ಲಿನ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಅವಧಿ ಮೀರಿದ ಮಾತ್ರೆಗಳನ್ನು ನೀಡಿದ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ವಿರುದ್ಧ ಸಿಪಿಎಂ ಪ್ರತಿಭಟನೆ ನಡೆಸಿದೆ. ಬಾಯಾರು ಕುಟುಂಬ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಅವಧಿ ಮೀರಿದ ಔಷಧಿಗಳನ್ನು ನೀಡಿದ್ದು, ರೋಗಿಗಳ ಆರೋಗ್ಯದ ಮೇಲೆ ಆಸ್ಪತ್ರೆ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆ ಎಂದು ದೂರಿದ್ದಾರೆ. ಇಲ್ಲಿ ಇರಬೇಕಾದ ಔಷಧಿಗಳು ಇಲ್ಲ, ಅಗತ್ಯದ ನೌಕರರಿಲ್ಲವೆಂದು ಸಿಪಿಎಂ ದೂರಿದೆ. ಈ ಬಗ್ಗೆ ನಡೆದ ಪ್ರತಿಭಟನೆಯಲ್ಲಿ ಮುಳಿಗದ್ದೆ ವಾರ್ಡ್ ಸದಸ್ಯ ಝಕಾರಿಯ ಬಾಯಾರು ಅಧ್ಯಕ್ಷತೆ ವಹಿಸಿದರು. ಸಿಪಿಎಂ ಏರಿಯಾ …

ವಿ.ಡಿ.ಸತೀಶನ್ ಸರಕಾರವು ಮಾಫಿಯಾ ಪ್ರಾಯೋಜಿತ  ಆಡಳಿತವೇ ಎಂದು ಶಂಕಿಸಬೇಕಾಗಿದೆ-ಪಿ.ಕೆ. ಕೃಷ್ಣದಾಸ್

ಕಾಸರಗೋಡು : ರಾಜ್ಯದೊಳಗಿನ ಹಾಗೂ ಹೊರಗಿನ ಪ್ರಯಾಣದಿಂದ ಹಿಡಿದು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಾಯೋಜಕತ್ವವೇ ಎಂದು ಹೇಳಿಕೊಳ್ಳುತ್ತಿರುವ ವಿ.ಡಿ. ಸತೀಶನ್ ಸರ್ಕಾರ ಮಾಫಿಯಾಗಳಿಂದ ಪ್ರಾಯೋಜಿತವಾದ ಆಡಳಿತವಾಗಿ ಮಾರ್ಪಟ್ಟಿದೆಯೇ ಎಂದು ಶಂಕಿಸಬೇಕಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪಿ.ಕೆ. ಕೃಷ್ಣದಾಸ್ ತಿಳಿಸಿದ್ದಾರೆ . ಚೀಮೇನಿಯಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಪಿಣರಾಯಿ ವಿಜಯನ್ ಸರ್ಕಾರದ ಅವಧಿಯಲ್ಲಿ ನಡೆದ ಹೆಲಿಕಾಪ್ಟರ್ ವ್ಯವಹಾರದಲ್ಲಿ ಸಂಶಯದ ನೆರಳಿನಲ್ಲಿದ್ದ ಕಂಪನಿಗೇ ಪುನಃ ಗುತ್ತಿಗೆ ನೀಡಲು …

ಗಾಯಕ ರತ್ನಾಕರ ಓಡಂಗಲ್ಲುರವರ ತಾಯಿ ನಿಧನ

ಬದಿಯಡ್ಕ: ವಾಣಿಯಗಾಣಿಗ ಸಭಾ ಜಿಲ್ಲಾ ಕಾರ್ಯದರ್ಶಿ, ಗಾಯಕ ರತ್ನಾಕರ ಓಡಂಗಲ್ಲು ಇವರ ತಾಯಿ ತೇಯಮ್ಮ (76) ನಿಧನ ಹೊಂದಿದರು. ವಿದ್ಯಾಗಿರಿ ಬಳಿಯ ಓಡಂಗಲ್ಲು ನಿವಾಸಿಯಾಗಿದ್ದಾರೆ. ಅಸೌಖ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದ ಇವರು ನಿನ್ನೆ ಬೆಳಿಗ್ಗೆ ನಿಧನ ಹೊಂದಿದ್ದಾರೆ. ಇವರ ಪತಿ ರಾಮ ಪಾಟಾಳಿ ಈ ಹಿಂದೆಯೇ ನಿಧನ ಹೊಂದಿದ್ದಾರೆ. ಮೃತರು ಪುತ್ರ ರತ್ನಾಕರ ಓಡಂಗಲ್ಲು, ಪುತ್ರಿ ಶಾರದಾ, ಅಳಿಯ ದಯಾನಂದ, ಸೊಸೆ ಕವಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವೆ ಪುತ್ರಿ ಸಾವಿತ್ರಿ ಈ ಹಿಂದೆ ನಿಧನ ಹೊಂ …