ಒಂದೇ ದಿನ ಎರಡು ಸ್ಕೂಟರ್ ಕಳವುಗೈದ ಆರೋಪಿ ಮೂರನೇ ಕಳವು ಯತ್ನ ವೇಳೆ ಕಸ್ಟಡಿಗೆ
ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಒಂದೇ ದಿನ ಎರಡು ಸ್ಕೂಟರ್‌ಗಳನ್ನು ಕಳವುಗೈದ ಆರೋಪಿಯನ್ನು ಪೊಲೀಸರು ಅತೀ ಸಾಹಸದಿಂದ ಸೆರೆಹಿಡಿದಿದ್ದಾರೆ. ತಲಪ್ಪಾಡಿ ನಿವಾಸಿ ಸುನಿಲ್ (32) ಎಂಬಾತ ಕಸ್ಟಡಿಯಲ್ಲಿರುವ ಆರೋಪಿ. ಮಂಜೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ಎಂ.ವಿ. ವಿಷ್ಣುಪ್ರಸಾದ್ ನೇತೃತ್ವದಲ್ಲಿ ಎಸ್‌ಐಗಳಾದ ಶಬರಿಕೃಷ್ಣನ್, ಅರ್ಜುನ್ ಅರವಿಂದನ್ ಎಂಬಿವರು ನಾಗರಿಕರ ಸಹಾಯದೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಕಸ್ಟಡಿಗೆ ತೆಗೆಯಲಾಗಿದೆ. ಈತನನ್ನು ಸಮಗ್ರ ತಪಾಸಣೆಗೊಳಪಡಿ ಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಸುನಿಲ್ ಕಳವಿಗಾಗಿ ತಲುಪಿದ ಸ್ಕೂಟರ್‌ನ್ನು ಕಸ್ಟಡಿಗೆ ತೆಗೆಯಲಾಗಿದೆ. ಉದ್ಯಾವರದ …
Read more “ಒಂದೇ ದಿನ ಎರಡು ಸ್ಕೂಟರ್ ಕಳವುಗೈದ ಆರೋಪಿ ಮೂರನೇ ಕಳವು ಯತ್ನ ವೇಳೆ ಕಸ್ಟಡಿಗೆ”