ಬಿಇಎಂ ಶಾಲಾ ಕಲೋತ್ಸವಕ್ಕೆ ಚಾಲನೆ

ಕಾಸರಗೋಡು: ನಗರದ ಬಿಇಎಂ ಶಾಲೆಯ ಕಲೋತ್ಸವವನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಹರೀಶ್ ಕೆ.ಆರ್ ಹಾಗೂ ನಗರಸಭಾ ಸದಸ್ಯ ಕೆ.ಎನ್. ರಾಮಕೃಷ್ಣ ಹೊಳ್ಳ ಜಂಟಿಯಾಗಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಮುಖ್ಯೋ ಪಾಧ್ಯಾಯ ಗಣೇಶ್ ಕೆ ಅಧ್ಯಕ್ಷತ ವಹಿಸಿದರು. ಶಾಲಾ ಅಭಿವೃದ್ಧಿ ಸಮಿತಿ  ಅಧ್ಯಕ್ಷ ಕೆ.ಎನ್. ವೆಂಕ್ರಟಮಣ ಹೊಳ್ಳ, ಎಂಪಿಟಿಎ ಅಧ್ಯಕ್ಷೆ ಚೇತನ, ಪಿಟಿಎ ಉಪಾಧ್ಯಕ್ಷ ಕಿಶೋರ್ ಎಸ್‌ವಿಟಿ, ಕಲೋತ್ಸವ ಕನ್ವೀನರ್ ಸ್ಮಿತಾ ಸಿರಿಯಾಕ್ ಯಶವಂತ ಮಾಸ್ತರ್, ರೋಹಿತಾಕ್ಷಿ ಟೀಚರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಯರು ಪ್ರಾರ್ಥನೆ ಹಾಡಿದರು. ಬಾಲಕೃಷ್ಣ ಮಾಸ್ತರ್ …

ರಾಜ್ಯ ಅತ್ಲೆಟಿಕ್ಸ್ ಮೀಟ್‌ನಲ್ಲಿ 4 ಚಿನ್ನ, 5 ಬೆಳ್ಳಿ ಪದಕದ ಸಾಧನೆ: ಆಯಿಷತ್ ತಾಹಿರಾಳಿಗೆ ಶೇಣಿಯಲ್ಲಿ ಅಭಿನಂದನೆ

ಪೆರ್ಲ: ಕೊಚ್ಚಿಯಲ್ಲಿ ನಡೆದ ಮಲಯಾಳಿ ಮಾಸ್ಟರ್ಸ್ ರಾಜ್ಯ ಅತ್ಲೆಟಿಕ್ ಮೀಟ್‌ನಲ್ಲಿ  ಮಣಿಯಂಪಾರೆ ನಿವಾಸಿ ಆಯಿಷತ್ ತಾಹಿರ ನಾಲ್ಕು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕದೊಂದಿಗೆ ಗಮನಾರ್ಹ ಸಾಧನೆ ಮಾಡಿದ್ದಾರೆ. ಹಿರಿಯ ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಿದ ಆಯಿಷತ್ ತಾಹಿರ ೩೧.4೦ ಸೆಕೆಂಡ್‌ನಲ್ಲಿ ೨೦೦ ಮೀಟರ್ ಓಟದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. 4೦೦ ಮೀಟರ್ ಓಟದಲ್ಲೂ, ೪೧೦೦ ಮೀಟರ್ ರಿಲೇಯಲ್ಲೂ, 44೦೦ ಮೀಟರ್ ರಿಲೇಯಲ್ಲೂ ಇವರು ಚಿನ್ನದ ಪದಕ ಗಳಿಸಿದ್ದಾರೆ. 1೦೦ ಮೀಟರ್ ಓಟದಲ್ಲಿ ಬೆಳ್ಳಿ ಪದಕ ಲಭಿಸಿದೆ. …

ಆಡಳಿತ ಸಮಿತಿ ವಿರುದ್ಧ ನಕಲಿ ಸುದ್ಧಿ ಪ್ರಕಟಿಸಿದ ಮಾಧ್ಯಮಗಳ ವಿರುದ್ಧ ಪುತ್ತಿಗೆ ಪಂಚಾಯತ್ ಕಾನೂನು ಕ್ರಮಕ್ಕೆ

ಕುಂಬಳೆ: ಪುತ್ತಿಗೆ ಪಂಚಾಯತ್ ಆಡಳಿತ ಸಮಿತಿ ಹಾಗೂ ನೌಕರರ ವಿರುದ್ಧ ಸಿಪಿಎಂ ನಡೆಸುವ ಅಪವಾದ ಪ್ರಚಾರದ ವಿರುದ್ಧ ಕಾನೂನು ಕ್ರಮ ಸ್ವೀಕರಿಸುವುದಾಗಿ ಆಡಳಿತ ಸಮಿತಿ ಸುದ್ಧಿಗೋಷ್ಠಿಯಲ್ಲಿ ತಿಳಿಸಿದೆ. ಆಧಾರರಹಿತವಾದ ಆರೋಪಗಳ ಮೂಲಕ ಪಂಚಾಯತ್ ಆಡಳಿತವನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಹಾನಿಗೊಳಿಸಲಿರುವ ಯತ್ನ ನಡೆ ಯುತ್ತಿದೆ ಎಂದು ಆಡಳಿತ ಸಮಿತಿ ದೂರಿದೆ.  ಆಡಳಿತ ಸಮಿತಿ ಸದಸ್ಯರು, ನೌಕರರು ಔದ್ಯೋಗಿಕ ರಜಾದಿನದಂದು ಸ್ವಂತ ವೆಚ್ಚದಲ್ಲಿ ನಡೆಸಿದ ಪ್ರಯಾಣವನ್ನು ಪ್ರಾಯೋಜಿತ ಪ್ರಯಾಣವಾಗಿ ಚಿತ್ರೀಕರಿಸಿ ನಕಲಿ ಸುದ್ಧಿ ಪ್ರಚಾರಪಡಿ ಸುತ್ತಿರುವುದಾಗಿ ಅವರು ಆರೋಪಿಸಿದರು. …

ವೃದ್ಧರ ದಿನದಂದು ಸಿಪಿಎಂನ ಕೊಲೆ ಬೆದರಿಕೆ ಖಂಡನೀಯ- ಎಂ.ಎಲ್. ಅಶ್ವಿನಿ

ಕಾಸರಗೋಡು: ವೃದ್ಧರ ದಿನದಂದು ಹಿರಿಯ ನಾಗರಿಕರನ್ನು ಗೌರವಿಸುವುದಕ್ಕಾಗಿ ತಲುಪಿದ ಪುರುಷ ಸ್ವ-ಸಹಾಯ ಸಂಘದ ಕಾರ್ಯಕರ್ತರನ್ನು ತಡೆದು ಕೊಲೆ ಬೆದರಿಕೆಯೊಡ್ಡಿದ ಸಿಪಿಎಂ ಮುಖಂಡನ ಕ್ರಮ ಖಂಡನೀಯವೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಕಮ್ಯೂನಿಸ್ಟ್ ಶಕ್ತಿ ಕೇಂದ್ರಗಳಲ್ಲಿ ನೆಲೆಗೊಂಡಿರುವ ಪ್ರಜಾಪ್ರಭುತ್ವ ವಿರುದ್ಧ  ನೀತಿಯ ದೃಷ್ಟಾಂತವಾಗಿದೆ ಈ ರೀತಿಯ ಘಟನೆಗಳೆಂದು ಅವರು ನುಡಿದರು. ಕಳೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ ಮಡಿಕೈ ಪಂಚಾಯತ್‌ನ 13ನೇ ವಾರ್ಡ್‌ನಿಂದ ಸ್ಪರ್ಧಿಸಿದ ಪಿ. ಸುರೇಶನ್ 263 ಮತಗಳನ್ನು ಗಳಿಸಿರುವುದರಲ್ಲಿರುವ ರಾಜಕೀಯ ದ್ವೇಷವೇ ಘಟನೆಯ ಹಿಂದಿರುವುದು ಎಂದು ಅಶ್ವಿನಿ …

ಯೂತ್ ಕಾಂಗ್ರೆಸ್ ವಿರುದ್ಧ ಕುಂಬಳೆಯಲ್ಲಿ  ಬಿಜೆಪಿಯಿಂದ ಪ್ರತಿಭಟನಾ ಮೆರವಣಿಗೆ

ಕುಂಬಳೆ:  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇರಳಕ್ಕೆ ಬಂದಾಗ   ಕಪ್ಪು ಬಾವುಟ ತೋರಿಸಿ ದೇಶದ ಭದ್ರತೆಗೆ ಸವಾಲೊಡ್ಡಿದ ಹಾಗೂ  ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್‌ರಿಗೆ  ನೆಯ್ಯಾಟಿಂಗರದಲ್ಲಿ ತಡೆಯೊಡ್ಡಿ ಅವರ ವಾಹನಕ್ಕೆ ಹಾನಿಗೈದು ಬಿಯರ್ ಬಾಟ್ಲಿ ಎಸೆದು ಶಾರೀರಿಕ ವಾಗಿ ಹಲ್ಲೆಗೆ ಮುಂದಾಗಿರುವ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಕೃತ್ಯವನ್ನು ಖಂಡಿಸಿ ಬಿಜೆಪಿ ಕುಂಬಳೆ ಮಂಡಲ ಮತ್ತು ಪಂಚಾಯತ್ ಸಮಿತಿಗಳ ನೇತೃತ್ವದಲ್ಲಿ ಕುಂಬಳೆಯಲ್ಲಿ ಪ್ರತಿಭಟನಾ   ಮೆರವಣಿಗೆ  ನಡೆಸಲಾಯಿತು. ಬಳಿಕ ನಡೆದ ಸಭೆಯಲ್ಲಿ ಬಿಜೆಪಿ ಮಂಡಲ …

ಯಾದವ ಸಮಾಜದ ಹಿರಿಯ ನಿಧನ

ಬೆಳ್ಳೂರು: ಯಾದವ ಸಮಾಜದ ಹಿರಿಯ ಸದಸ್ಯ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಆರ್ಲಪದವು ದೇವಸ್ಯ ನಿವಾಸಿ ಮಹಾಲಿಂಗ ಮಣಿಯಾಣಿ (95) ಸ್ವ-ಗೃಹದಲ್ಲಿ ನಿಧನ ಹೊಂದಿದರು.  ಆರ್ಲಪದವಿನಲ್ಲಿ ತರಕಾರಿ ಅಂಗಡಿ ಹಾಗೂ ದೇವಸ್ಯದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದರು. ಯಾದವ ಸಮುದಾಯದ ಮಾರ್ಗದರ್ಶಕರಾಗಿದ್ದ ಇವರು ಆರ್ಲಪದವಿನಲ್ಲಿ ಪ್ರಥಮ ಬಾರಿಗೆ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಆರಂಭಿಸಲು ಕಾರಣಕರ್ತರಾಗಿ ದ್ದರು. ಆರ್ಲಪದವು ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇಗುಲದ ಜೀರ್ಣೋದ್ಧಾರ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಮೃತರು ನಾಲ್ವರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು …