ಪುತ್ತಿಗೆ ಮುಗುರೋಡ್‌ನಲ್ಲಿ ವಾಹನ ಅಪಘಾತ : ಯುವಕನ ಸಾವಿನಿಂದ ಶೋಕಸಾಗರ

ಸೀತಾಂಗೋಳಿ: ಸೀತಾಂಗೋಳಿ-ಪೆರ್ಲ ರಸ್ತೆಯ ಮುಗು ರೋಡ್‌ನಲ್ಲಿ  ಸಂಭವಿಸಿದ ವಾಹನ ಅಪಘಾತದಲ್ಲಿ ಯುವಕ ಮೃತಪಟ್ಟ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಮುಗು ಊಜಂಪದವಿನ ದಿ| ಮೊಯ್ದು ಎಂಬವರ ಪುತ್ರ ಎಂ.ಟಿ. ಮುಹಮ್ಮದ್ ಅಶ್ರಫ್ (೪೦) ಮೃತಪಟ್ಟ ದುರ್ದೈವಿಯಾಗಿದ್ದಾರೆ.  ನಿನ್ನೆ ಮಧ್ಯಾಹ್ನ ವೇಳೆ ಈ ಅಪಘಾತ ಸಂಭವಿಸಿದೆ. ಪತ್ನಿ ಖೈರುನ್ನೀಸರನ್ನು  ತಪಾಸಣೆ ನಡೆಸಲೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ದಂಪತಿ ಸಂಚರಿಸುತ್ತಿದ್ದ ಬೈಕ್ ಮುಗುರೋಡ್‌ಗೆ ತಲುಪಿದಾಗ ಅಪರಿಮಿತ ವೇಗದಲ್ಲಿ ಬಂದ ಕಾರು  ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ …

17ರ ಹರೆಯದ ಬಾಲಕಿ ಗರ್ಭಿಣಿ : 45ರ ವ್ಯಕ್ತಿ ವಿರುದ್ಧ ಪೋಕ್ಸೋ ಕೇಸು

ಬದಿಯಡ್ಕ: 45ರ ಹರೆಯದ ವ್ಯಕ್ತಿಯಿಂದ ಲೈಂಗಿಕ ಕಿರುಕುಳಕ್ಕೊಳಗಾದ 17ರ ಹರೆಯದ ಬಾಲಕಿ ಗರ್ಭಿಣಿಯಾಗಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಬದಿಯಡ್ಕ ಪೊಲೀಸರು ವ್ಯಕ್ತಿ ವಿರುದ್ಧ ಪೋಕ್ಸೋ ಪ್ರಕಾರ ಕೇಸು ದಾಖಲಿಸಿ  ತನಿಖೆ ಆರಂಭಿಸಿದ್ದಾರೆ.  ಅಸಹನೀಯ ಹೊಟ್ಟೆ ನೋವು ಅನುಭವಗೊಂಡ ಬಾಲಕಿ  ಚಿಕಿತ್ಸೆಗಾಗಿ ಆಸ್ಪತ್ರೆಗೆ ತಲುಪಿದಾಗಲೇ ಆಕೆ ಗರ್ಭಿಣಿಯಾಗಿದ್ದಾಳೆಂಬ ವಿಷಯ ತಿಳಿದುಬಂದಿದೆ. ಈ ಬಗ್ಗೆ ವೈದ್ಯರು  ಬದಿಯಡ್ಕ ಪೊಲೀಸರಿಗೆ ತಿಳಿಸಿದ್ದಾರೆ. ಇದರಂತೆ ಪೊಲೀಸರು ಬಾಲಕಿಯಿಂದ ಮಾಹಿತಿ ಸಂಗ್ರಹಿಸಿಕೊಂಡ ಬಳಿಕ ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ.    …

ನಿಲ್ಲಿಸಿದ್ದ ಕಾರಿನಿಂದ ಎಂಡಿಎಂಎ, 3 ಲಕ್ಷ ರೂ. ವಶ: ಹಲವು ಪ್ರಕರಣಗಳ ಆರೋಪಿ ಬಂಧನ

ಕುಂಬಳೆ: ಮುಟ್ಟಂ ರೈಲ್ವೇ ಗೇಟ್ ಸಮೀಪ ನಿಲ್ಲಿಸಿದ್ದ ಕಾರಿನಿಂದ 2,97,500 ರೂ. ಹಾಗೂ 1.8 ಗ್ರಾಂ ಎಂಡಿಎಂಎ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದು, ಈ ಸಂಬಂಧ ಓರ್ವನನ್ನು ಬಂಧಿಸಲಾಗಿದೆ. ಶಿರಿಯ ಬತ್ತೇರಿಯ ಬತ್ತೇರಿ ಮಹಲ್‌ನ ಅಬ್ದುಲ್ಲ ಅನ್ಸಾದ್ (26) ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಮೇಲ್ನೋಟದಲ್ಲಿರುವ ನಾರ್ಕೋಟಿಕ್ ಸೆಲ್ ಡಾನ್ಸಾಪ್ ಟೀಂ ಹಾಗೂ ಕುಂಬಳೆ ಪೊಲೀಸರು ಸಂಯುಕ್ತವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ  ಈತನನ್ನು ಬಂಧಿಸಲಾಗಿದೆ. ಅನ್ಸಾದ್ ವಿರುದ್ಧ  ಮಂಜೇಶ್ವರ ಹಾಗೂ ವಿದ್ಯಾನಗರದಲ್ಲಿ ಕೇಸುಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ …

ನಿರ್ಮಾಣ ಹಂತದ ಮನೆಯಿಂದ ಕೇಬಲ್ ಕಳವು: ಇಬ್ಬರ ಸೆರೆ

ಕಾಸರಗೋಡು: ನಿರ್ಮಾಣ ಹಂತದಲ್ಲಿರುವ ಮನೆಯಿಂದ ವಯರ್ ಹಾಗೂ ಕೇಬಲ್ ಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ವಿದ್ಯಾನಗರ ಠಾಣೆ ಎಸ್‌ಐ ವಿಜಯನ್ ಮೇಲೋತ್ತ್ ನೇತೃತ್ವದ ತಂಡ ಬಂಧಿಸಿದೆ. ಪಳ್ಳಿಕ್ಕೆರೆ ಕಿಳಕ್ಕೇಕರ ತೊಟ್ಟಿ ನಿವಾಸಿ ರತೀಶ್ ಟಿ.ಎಫ್ (36) ಮತ್ತು ಪಳ್ಳಿಕ್ಕೆರೆ ಕೀಕಾನ ಕೂಟಕ್ಕನಿ ನಿವಾಸಿ ಕರುಣಾಕರನ್ ಕೆ.ಎ (64) ಬಂಧಿತ ಆರೋಪಿಗಳು. ತೆಕ್ಕಿಲ್ ಬೇವಿಂಜೆಯ ಅರಫಾ ಮಂಜಿಲ್‌ನ ಎಂ.ಟಿ. ಅಬ್ದುಲ್ ಕಬೀರ್ ಎಂಬಿವರ ನಿರ್ಮಾಣ ಹಂತದಲ್ಲಿರುವ ಮನೆಯಿಂದ ಸೆ. 17ರಿಂದ 18ರ ನಡುವಿನ ಸಮಯದಲ್ಲಿ ವಯರ್ ಮತ್ತು …

ವುಮೆನ್ ಆಫ್‌ದಿ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳಿದ ಮಂಜೇಶ್ವರದ ಕ್ಷಮಾ ರವೀಂದ್ರ

ಮಂಜೇಶ್ವರ: ಸಾಂಸ್ಕೃತಿಕವಾಗಿ ಶ್ರೀಮಂತವಾದ ಗಡಿ ಪ್ರದೇಶದಿಂದ ದಕ್ಷಿಣ ಕೊರಿಯಾದ ಸೋಲ್‌ನಲ್ಲಿರುವ ಅಂತಾರಾಷ್ಟ್ರೀಯ ವೇದಿಕೆಯವರೆಗೆ  ತನ್ನ ಸಾಧನೆಯನ್ನು ಉದ್ಯಾವರ ನಿವಾಸಿ ರವೀಂದ್ರ ಕೆ.ಎಸ್- ಕುಶಲ ಆರ್. ದಂಪತಿ ಪುತ್ರಿ ಕ್ಷಮಾ ರವೀಂದ್ರ ವಿಸ್ತರಿಸಿಕೊಂಡಿದ್ದಾರೆ.  ನಿನ್ನೆಯಿಂದ ಆರಂಭಗೊಂಡ ವುಮೆನ್ ಆಫ್ ದಿ ಯೂನಿವರ್ಸ್ 2026ರಲ್ಲಿ ಭಾರತವನ್ನು ಪ್ರತಿನಿಧೀಕರಿಸಿ ಸ್ಪರ್ಧಿಸಲು ಇವರು ಅಲ್ಲಿಗೆ ತಲುಪಿದ್ದಾರೆ. ಗಡಿ ಪ್ರದೇಶವಾದ ಮಂಜೇಶ್ವರದಲ್ಲಿ ಹುಟ್ಟಿ ಬೆಳೆದು ಕೇರಳ ಮತ್ತು ಕರ್ನಾಟಕದಲ್ಲಿ ಸಂಪರ್ಕವನ್ನು ಹೊಂದಿ ಶಿಕ್ಷಣ ಕೈಗೊಂಡ ಇವರು ಬಳಿಕ 12 ವರ್ಷ ಜಿಸಿಸಿಯಲ್ಲಿ ವಾಸವಾಗಿದ್ದರು. ಆ …

ದೇಹಕ್ಕೆ ಸೀಮೆ ಎಣ್ಣೆ ಸುರಿದು ಕಿಚ್ಚಿರಿಸಿ ಗಂಭೀರ ಸುಟ್ಟು ಗಾಯಗೊಂಡಿದ್ದ ಯುವತಿ ಸಾವು

ಕಾಸರಗೋಡು: ದೇಹಕ್ಕೆ ಸೀಮೆ ಎಣ್ಣೆ ಸುರಿದು ಕಿಚ್ಚಿರಿಸಿ ಗಂಭೀರ ಸುಟ್ಟು ಗಾಯಗೊಂಡು ಚಿಕಿತ್ಸೆಂi ಲ್ಲಿದ್ದ ಯುವತಿ ಚಿಕಿತ್ಸೆ ಫಲಕಾರಿ ಯಾಗದೆ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಬೇಡಗಂ ತೋರ ನಿವಾಸಿ ದಿ| ನಾರಾಯಣನ್ ಎಂಬವರ ಪುತ್ರಿ ಹರಿಶ್ರೀ (40) ಸಾವನ್ನಪ್ಪಿದ ಯುವತಿ. ಇವರು ಕಳೆದ ಜುಲೈ 21ರಂದು ಮನೆಯ ಶೌಚಾಲಯದಲ್ಲಿ ದೇಹಕ್ಕೆ ಸೀಮೆ ಎಣ್ಣೆ ಸುರಿದು ಕಿಚ್ಚಿರಿಸಿ ಗಂಭೀರ ಸುಟ್ಟು ಗಾಯಗೊಂಡಿದ್ದರು. ನಂತರ ಅವರನ್ನು ಮೊದಲು ಮಂಗಳೂರಿನ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿ ಉನ್ನತ ಮಟ್ಟದ ಚಿಕಿತ್ಸೆಗಾಗಿ ಕಲ್ಲಿಕೋಟೆ …

ಬದಿಯಡ್ಕ ಮಂಡಲ ಕಾಂಗ್ರೆಸ್‌ನಿಂದ ಗಾಂಧಿಜಯಂತಿ ಆಚರಣೆ

ಬದಿಯಡ್ಕ: ಬದಿಯಡ್ಕ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜನ್ಮ ದಿನಾಚರಣೆ ನಡೆಸಲಾಯಿತು. ಇದರಂಗವಾಗಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಬಳಿಕ ನಡೆದ ಸಭೆಯಲ್ಲಿ ಮಂಡಲ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ನೇತಾರರಾದ ಚಂದ್ರಹಾಸ ರೈ,  ನಾರಾಯಣ ಮಣಿಯಾಣಿ ನೀರ್ಚಾಲು,ಗಂಗಾಧರ ಗೋಳಿಯಡ್ಕ,  ರಾಮ ಪಟ್ಟಾಜೆ, ಕೃಷ್ಣದಾಸ್ ಡಿ, ಸರಶೀರ್ವಾಕ್ಷನ್ ನಂಬ್ಯಾರ್, ಶ್ರೀನಾಥ್ ಬದಿಯಡ್ಕ, ಕುಮಾರನ್ ನಾಯರ್, ಚಂದ್ರಹಾಸನ್ ಮಾಸ್ತರ್, ಮುಹಮ್ಮದ್ ಅರಮನೆ, ವಾಮನ ನಾಯ್ಕ, ಸತೀಶ ಪೆರುಮುಂಡ, ಸುಧೀರ್ ಬಾಂಜತ್ತಡ್ಕ, ರಾಮಕೃಷ್ಣನ್, ರವೀಂದ್ರ …

ಡಿ. ನಾರಾಯಣ ನಿಧನ

 ಕಾಸರಗೋಡು: ಪನೆಯಾಲ್ ನೆಲ್ಯಡ್ಕಂ ಪಾರೆಮನೆ ನಿವಾಸಿ  ಡಿ. ನಾರಾಯಣ (86) ನಿಧನ ಹೊಂದಿದರು. ಸಿಪಿಸಿ ಕಂಪೆನಿಯಲ್ಲಿ ಚಾಲಕನಾಗಿ ನಿವೃತ್ತರಾಗಿದ್ದರು. ಮೃತರು ಪತ್ನಿ ಜಯಲಕ್ಷ್ಮಿ, ಮಕ್ಕಳಾದ ಕಮಲಾಕ್ಷ ಪಾರೆಮನೆ, ಸತೀಶ್ ಕುಮಾರ್ ಮಂಗಳೂರು, ಲಕ್ಷ್ಮೀಕಾಂತ್, ಜಯಲಕ್ಷ್ಮಿ ಮೈಲಾಟಿ, ಆಶಾಲತಾ, ಅಳಿಯಂದಿರಾದ ದೀಕ್ಷಿತ್ ಬಂಟ್ವಾಳ, ಸದಾನಂದ ಮೈಲಾಟಿ, ದೇವಿಪ್ರಸಾದ್, ಸಹೋದರರಾದ ಗುರುವಯ್ಯ ಮಂಗಳೂರು, ಮಂಜುನಾಥ, ಸಹೋದರಿ ಲಲಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವೆ ಪುತ್ರಿ ಸ್ಮಿತ, ಸಹೋದರಿ ಪದ್ಮಾವತಿ ಈ ಹಿಂದೆ ನಿಧನ ಹೊಂದಿದ್ದಾರೆ.

ಕಾಂಗ್ರೆಸ್ ಆಕ್ರಮಣ: ವರ್ಕಾಡಿಯಲ್ಲಿ ಬಿಜೆಪಿ ಪ್ರತಿಭಟನೆ

ವರ್ಕಾಡಿ: ಬಿಜೆಪಿ ನೇತಾರರ, ಪಕ್ಷದ ಕಚೇರಿಗೆ ಆಕ್ರಮಿಸಿದ ಕಾಂಗ್ರೆಸ್ ವಿರುದ್ಧ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಮಜೀರ್‌ಪಳ್ಳ ಪೇಟೆಯಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು. ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯ ಹರೀಶ್ಚಂದ್ರ ಮಂಜೇಶ್ವರ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ಕೇರಳದಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ. ಅಧಿಕಾರ ಮದದಲ್ಲಿ ಕಾಂಗ್ರೆಸ್ ಕಮ್ಯುನಿಸ್ಟನ್ನು ಹಿಂದಿಕ್ಕುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಸಲೀಲ್ ಮಾಸ್ಟರ್ ಮಾತನಾಡಿ ಕೇರಳದ ಮಂತ್ರಿಗಳಿಗೆ ಸಂಚರಿಸಲು ಕೋಟಿ …

ನಾಟಕ ನಿರ್ದೇಶಕ ವಿ. ಶಶಿ ನಿಧನ

ಹೊಸದುರ್ಗ: ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ ಪುರಸ್ಕೃತ ನಾಟಕ ನಿರ್ದೇಶಕ ವಿ. ಶಶಿ (75) ನೀಲೇಶ್ವರ ನಿಧನ ಹೊಂದಿದರು. ಅಸೌಖ್ಯದ ಹಿನ್ನೆಲೆಯಲ್ಲಿ ಚೆರುಕುನ್ನ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಇಂದು ಬೆಳಿಗ್ಗೆ ನಿಧನ ಸಂಭವಿಸಿದೆ. ನಾಟಕ ವಲಯದಲ್ಲಿ ಕೈಗೊಂಡ ಸೇವೆ ಪರಿಗಣಿಸಿ ೨೦೨೩ರ ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಇವರಿಗೆ ಲಭಿಸಿತ್ತು. ಹಲವಾರು ಖ್ಯಾತ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಮೃತರು ಪತ್ನಿ ಮೋತಿರಾಣಿ, ಮಕ್ಕಳಾದ ಶಾಂತಿ, ಉಣ್ಣಿಕೃಷ್ಣನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.