ಕಾಸರಗೋಡು: ಮುಸ್ಲಿಂ ಲೀಗ್ ಜಿಲ್ಲಾ ಅಧ್ಯಕ್ಷರಾಗಿ ಮಾಜಿ ಶಾಸಕ ಎನ್.ಎ. ನೆಲ್ಲಿಕುನ್ನುರನ್ನು ಘೋಷಿಸಲಾಗಿದೆ. ರಾಜ್ಯಾಧ್ಯಕ್ಷ ಸಯ್ಯೀದ್ ಸಾದಿಕ್ ಅಲಿ ಶಿಹಾಬ್ ತಂಙಳ್ ಈ ಘೋಷಣೆ ನಡೆಸಿದ್ದಾರೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎಂ. ಮುನೀರ್ ಹಾಜಿಯವರನ್ನು, ಕೋಶಾಧಿಕಾರಿಯಾಗಿ ಪಳ್ಳಿಕ್ಕರೆಯ ಕೆಇಎ ಬಕ್ಕರ್ರನ್ನು ಘೋಷಿಸಲಾಗಿದೆ. ಕೆ.ಎಂ. ಅಬ್ದುಲ್ ರಹ್ಮಾನ್, ವಿ.ಕೆ. ಬಾವ (ತೃಕರಿಪುರ) ಎಂಬಿವರನ್ನು ಹೊಸ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಅಶ್ರಫ್ ಎಡನೀರು ಜಿಲ್ಲಾ ಕಾರ್ಯದರ್ಶಿಯಾಗುವರು. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಪದಾಧಿಕಾರಿಗಳು ಹೊಸ ಹುದ್ದೆಗಳಿಗೆ ನೇಮಕಗೊಂಡ ಹಿನ್ನೆಲೆಯಲ್ಲಿ ಖಾಲಿಯಾದ ಸ್ಥಾನಗಳಿಗೆ ರಾಜ್ಯ ಅಧ್ಯಕ್ಷರು ಬದಲಿ ನೇಮಕಾತಿ ಕೈಗೊಂಡಿದ್ದಾರೆ.







