ಜಗತ್ತಿಗೆ ಜಗದ್ಗುರುವಾಗುವ ಭಾವ ಸ್ವಯಂಸೇವಕನ  ಮನದಲ್ಲಿ ಮೂಡಬೇಕು-ಕಜಂಪಾಡಿ ಸುಬ್ರಹ್ಮಣ್ಯ ಭಟ್

ಬದಿಯಡ್ಕ: ಜಗತ್ತಿಗೆ ಜಗದ್ಗುರು ವಾಗುವ ಭಾವ ಪ್ರತಿಯೊಬ್ಬ ಸ್ವಯಂ ಸೇವಕನ ಮನದಲ್ಲಿ ಮೂಡಿಬಂದಾಗ ಭಾರತ ವಿಶ್ವವಂದ್ಯವಾಗುತ್ತದೆ. ಜಗತ್ತಿನಲ್ಲಿರುವ ಆಸುರಿ ಮಾನಸಿಕತೆ ದೂರವಾಗಬೇಕು. ನಕಾರಾತ್ಮಕ ಯೋ ಚನೆ, ಯೋಜನೆಗಳು ಒಂದುಗೂಡುವ ಈ ಕಾಲಘಟ್ಟದಲ್ಲಿ ಸಕಾರಾತ್ಮಕ ಯೋ ಚನೆಯ ಮನಸ್ಸುಗಳು ಒಂದುಗೂಡಿ ಅವುಗಳನ್ನು ಹೋಗಲಾಡಿಸಬೇಕು ಎಂದು ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಆಮಂತ್ರಿತ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು.ಆರ್‌ಎಸ್‌ಎಸ್ ನೀರ್ಚಾಲು ಮಂಡಲ ವಿಜಯದಶಮಿ ಉತ್ಸವದ ಪಥಸಂಚನ ಹಾಗೂ ನೀರ್ಚಾಲು ಶಾಲಾ ಮೈದಾನದಲ್ಲಿ ಜರಗಿದ ಸಾರ್ವಜನಿಕ ಸಭೆಯಲ್ಲಿ ಅವರು …

ಸಾಮಾಜಿಕ ಜಾಲತಾಣ ಮೂಲಕ ಪರಿಚಯಗೊಂಡ ಯುವತಿಗೆ ದೌರ್ಜನ್ಯ: ಆರೋಪಿ ಸೆರೆ

ಹೊಸದುರ್ಗ: ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯಗೊಂಡ ಯುವತಿಗೆ ಹಲವು ರೀತಿಯಲ್ಲಿರುವ ಭರವಸೆಗಳನ್ನು ನೀಡಿ ಹಲವಾರು ಬಾರಿ ದೌರ್ಜನ್ಯಗೈದ ಯುವಕ ಸೆರೆಯಾಗಿದ್ದಾನೆ. ವಳಪಟ್ಟಣಂ ಪಾಪಿನಶ್ಶೇರಿ ವೆಲ್ಫೇರ್ ಶಾಲೆಯ ಬಳಿಯಿರುವ ರಾಸಿಕ್ (೩೮)ನನ್ನು ವಳಪಟ್ಟಣಂ ಸರ್ಕಲ್ ಇನ್ಸ್‌ಪೆಕ್ಟರ್ ಪಿ. ವಿಜೇಶ್‌ರ ನೇತೃತ್ವದಲ್ಲಿರುವ ತಂಡ ಸೆರೆ ಹಿಡಿದಿದೆ. ಆರೋಪಿಯನ್ನು ತಿರುವನಂತಪುರ, ಮಲಯಿನ್‌ಕೀಳ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ರಾಸಿಕ್ ಮಲಯನ್‌ಕೀಳ್ ನಿವಾಸಿಯಾದ ೩೭ರ ಹರೆಯದ ಯುವತಿಯನ್ನು ಪರಿಚಯಗೊಂಡಿದ್ದನು. ಬಳಿಕ ಈಕೆಯ ಜೊತೆ ಸಲುಗೆ ಬೆಳೆಸಿ ಹಲವು ರೀತಿಯ ಭರವಸೆಗಳನ್ನು ನೀಡಿದ …

ಭಾರೀ ಮಳೆ: ರೈಲು ಹಳಿಗೆ ಮಣ್ಣು ಬಿದ್ದು ಹಳಿತಪ್ಪಿದ ಇಂಜಿನ್

ತಿರುವನಂತಪುರ: ಪಾರಶಾಲಾದಲ್ಲಿ ರೈಲ್ವೇ ಹಳಿಗೆ ಮಣ್ಣು ಕುಸಿದು ಬಿದ್ದ ಹಿನ್ನೆಲೆಯಲ್ಲಿ ರೈಲಿನ ಇಂಜಿನ್ ಹಳಿತಪ್ಪಿದೆ. ಬಿಲಾಸ್‌ಪುರ್- ತಿರುನಲ್ವೇ ಲಿ ಎಕ್ಸ್‌ಪ್ರೆಸ್ ರೈಲು ಅಪಘಾತಕ್ಕೆ ತುತ್ತಾಗಿದೆ. ಇಂದು ಮುಂಜಾನೆ ೨ ಗಂಟೆ ವೇಳೆ ಹಳಿಗೆ ಮಣ್ಣು ಬಿದ್ದಿದೆ. ಈ ಸಮಯ ಆ ಹಳಿಯಲ್ಲಿ ಸಂಚರಿಸುತ್ತಿದ್ದ ರೈಲಿನ ಇಂಜಿನ್‌ನ ೪ ಚಕ್ರಗಳು ಹಳಿ ತಪ್ಪಿವೆ. ಆದರೆ ಯಾರಿಗೂ ಗಾಯ ಉಂಟಾಗಿಲ್ಲ. ಭಾರೀ ಮಳೆ ಹಿನ್ನೆಲೆಯಲ್ಲಿ ಮಣ್ಣು ಕುಸಿತ ಉಂಟಾಗಿತ್ತು. ಮಣ್ಣು ತೆರವು ಗೊಳಿಸಲಿರುವ ಯತ್ನ ಮುಂದುವರಿಯುತ್ತಿದೆ. ಘಟನೆಯಿಂದಾಗಿ ಮೂರು ರೈಲುಗಳ …

ಕಾರು ಕಾಲುವೆಗೆ ಬಿದ್ದು ಒಂದೇ ಕುಟುಂಬದ 3ಮಂದಿ ಮೃತ್ಯು

ಮಡಿಕೇರಿ: ಕೊಡಗು ವಿರಾಜಪೇಟೆ ತಾಲೂಕಿನ ಸಿದ್ಧಾಪುರ ಸಮೀಪ ಬಡಗು ಬನ್ನಂಗಳ ಗ್ರಾಮದಲ್ಲಿ ಕಾರು ಕಾಲುವೆಗೆ ಬಿದ್ದು ಮೂರು ವರ್ಷದ ಮಗು ಸಹಿತ ಒಂದೇ ಕುಟುಂಬದ ಮೂರು ಮಂದಿ ಮೃತಪಟ್ಟಿದ್ದಾರೆ. ಇಲ್ಲಿನ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿರುವ ವಿಜೇಶ್ (೩೬), ಪತ್ನಿ ಪ್ರಮಿತ (೩೫) ಪುತ್ರಿ ಲಿಯ ಎಂಬಿವರು ಮೃತಪಟ್ಟವರು. ಇರಿಟ್ಟಿ ನಿವಾಸಿ ಗಳಾದ ಇವರು ಕಳೆದ ೫ ವರ್ಷದ ಹಿಂದೆ ಸಿದ್ಧಾಪುರದಲ್ಲಿ ವಾಸ ಆರಂಭಿಸಿದ್ದರು. ಮಂಗಳವಾರ ರಾತ್ರಿ ಕಾಲುವೆಗೆ ಬಿದ್ದ ಕಾರನ್ನು ನಿನ್ನೆ ಬೆಳಿಗ್ಗೆ ತೋಟದ ಕಾರ್ಮಿಕರು ಪತ್ತೆಹಚ್ಚಿ …

ಬಂಗ್ರಮಂಜೇಶ್ವರ ರಸ್ತೆ ತಿರುವಲ್ಲಿ ವಿದ್ಯುತ್ ಕಂಬಕ್ಕೆ ಅಳವಡಿಸಿದ ಆಧಾರತಂತಿಯಿಂದ ಅಪಘಾತ ಆತಂಕ

ಮಂಜೇಶ್ವರ: ಹೊಸಂಗಡಿ ಬಳಿಯ ಬಂಗ್ರಮAಜೇಶ್ವರ ರಸ್ತೆಯ ತಿರುವೊಂದರಲ್ಲಿ ವಿದ್ಯುತ್ ಕಂಬಕ್ಕೆ ಅಳವಡಿಸಿದ ಆಧಾರ ತಂತಿ ವಾಹನ ಸವಾರರಿಗೆ ಆತಂಕವನ್ನುAಟುಮಾಡುತ್ತಿದೆ. ಈ ತಂತಿಯನ್ನು ರಸ್ತೆ ಬದಿಯಲ್ಲಿ ಅಳವಡಿಸಲಾಗಿದ್ದು, ಹೊಸಂಗಡಿ ಭಾಗಕ್ಕೆ ಬರುವ ವಾಹನ ಸವಾರರ ಗಮನಕ್ಕೆ ಬಾರದೆ ಎದುರಿನಿಂದ ಬರುವ ವಾಹನಕ್ಕೆ ಸೈಡು ನೀಡುವ ವೇಳೆ ತಂತಿಗೆ ಬಡಿದು ಅಪಘಾತ ಉಂಟಾಗುವ ಭೀತಿ ಕಾಡುತ್ತಿದೆ. ಬಂಗ್ರ ಮಂಜೇಶ್ವರ ದಾರಿಯಾಗಿ ಕಟ್ಟೆ ಬಜಾರ್, ಹೊಸಬೆಟ್ಟು, ತಲಪಾಡಿ ಮೊದಲಾದ ಭಾಗಗಳಿಂದ ಹೊಸಂಗಡಿ ಪೇಟೆಗೆ ದಿನನಿತ್ಯ ನೂರಾರು ವಾಹನಗಳು ಸಂಚಾರ ನಡೆಸುತ್ತಿವೆ. ಅಪಘಾತ …

ನಿವೃತ್ತ ಕಾಫಿತೋಟ ನೌಕರೆ ನಿಧನ

ಮಂಜೇಶ್ವರ: ಹೊಸಬೆಟ್ಟು ನಿವಾಸಿ ದಿ| ಸುಂದರ ರವರ ಪತ್ನಿ ಕಮಲಾ (66) ನಿಧನ ಹೊಂದಿದರು. ಕರ್ನಾಟಕದ ಮೂಡಿಗೆರೆಯ ಕಾಫಿ ತೋಟದಲ್ಲಿ ನೌಕರೆಯಾಗಿದ್ದು, ನಿವೃತ್ತಿ ಪಡೆದ ಬಳಿಕ ಮಂಜೇಶ್ವರದ ಹೊಸಬೆಟ್ಟು ನಲ್ಲಿ ಕುಟುಂಬ ಸದಸ್ಯರ ಜೊತೆ ವಾಸಿಸುತಿದ್ದರು. ಮೃತರು ಮಕ್ಕಳಾದ ನಾರಾಯಣ, ಸುರೇಂದ್ರ, ನೇತ್ರಾವತಿ, ಚೈತ್ರಾ, ಸಹೋದರರಾದ ದಾಮೋದರ (ಅರಣ್ಯ ಇಲಾಖೆಯ ನಿವೃತ್ತ ಉದ್ಯೋಗಿ), ಎಚ್.ಎಂ. ಪೂವಪ್ಪ (ನಿವೃತ್ತ ಪೊಲೀಸ್ ಸಬ್‌ಇನ್ಸ್ಪೆಕ್ಟರ್) ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.