ಮಡಿಕೇರಿ: ಕೊಡಗು ವಿರಾಜಪೇಟೆ ತಾಲೂಕಿನ ಸಿದ್ಧಾಪುರ ಸಮೀಪ ಬಡಗು ಬನ್ನಂಗಳ ಗ್ರಾಮದಲ್ಲಿ ಕಾರು ಕಾಲುವೆಗೆ ಬಿದ್ದು ಮೂರು ವರ್ಷದ ಮಗು ಸಹಿತ ಒಂದೇ ಕುಟುಂಬದ ಮೂರು ಮಂದಿ ಮೃತಪಟ್ಟಿದ್ದಾರೆ. ಇಲ್ಲಿನ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿರುವ ವಿಜೇಶ್ (೩೬), ಪತ್ನಿ ಪ್ರಮಿತ (೩೫) ಪುತ್ರಿ ಲಿಯ ಎಂಬಿವರು ಮೃತಪಟ್ಟವರು. ಇರಿಟ್ಟಿ ನಿವಾಸಿ ಗಳಾದ ಇವರು ಕಳೆದ ೫ ವರ್ಷದ ಹಿಂದೆ ಸಿದ್ಧಾಪುರದಲ್ಲಿ ವಾಸ ಆರಂಭಿಸಿದ್ದರು. ಮಂಗಳವಾರ ರಾತ್ರಿ ಕಾಲುವೆಗೆ ಬಿದ್ದ ಕಾರನ್ನು ನಿನ್ನೆ ಬೆಳಿಗ್ಗೆ ತೋಟದ ಕಾರ್ಮಿಕರು ಪತ್ತೆಹಚ್ಚಿ ದ್ದಾರೆ. ಬಳಿಕ ಕಾರನ್ನು ಮೇಲಕ್ಕೆತ್ತಿ ದಾಗ ಅದರೊಳಗೆ ಮೂರು ಮೃತದೇಹಗಳು ಕಂಡು ಬಂದಿದೆ.
ಈ ಪ್ರದೇಶದಲ್ಲಿ ರಾತ್ರಿ ವೇಳೆ ಭಾರೀ ಮಳೆ ಹಾಗೂ ಮಂಜು ಇತ್ತೆನ್ನಲಾಗಿದೆ. ಇದರಿಂದಾಗಿ ಕಾರು ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ.






