ಜೋಡುಕಲ್ಲು ಗಣೇಶಮಂದಿರ ಸಂರಕ್ಷಣೆಗೆ ಕರಾವಳಿಯ ಸಮಸ್ತ  ಹಿಂದೂಗಳ ಬೆಂಬಲ- ಶಾಸಕ ಗುರುರಾಜ್ ಗಂಟಿಹೊಳೆ

ಮಂಜೇಶ್ವರ: ಜೋಡುಕಲ್ಲು ತಪೋ ಭೂಮಿ ಸಂರಕ್ಷಣೆ ಕಾಸರಗೋ ಡಿನ ಹಿಂದೂಗಳ ಮಾತ್ರ ಜವಾಬ್ದಾರಿ ಅಲ್ಲ, ಕಾಸರಗೋಡಿನಿಂದ ಬೈಂ ದೂರು ವರೆಗಿನ ಸಮಸ್ತ ಕರಾವಳಿಯ ಹಿಂದೂಗಳ ಬಹಿರಂಗ ಬೆಂಬಲ ಇದಕ್ಕಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿ ಹೊಳೆ ಹೇಳಿದರು. ಸ್ಥಳಕ್ಕೆ ಭೇಟಿ ನೀಡಿ ಅವರು ಬೆಂಬಲ ಘೋಷಣೆ ಮಾಡಿದರು. ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್, ಜೋಡುಕಲ್ಲು ಗಣೇಶ ಮಂದಿರ ಸಂರಕ್ಷಣಾ ಕ್ರಿಯಾ ಸಮಿತಿ ಅಧ್ಯಕ್ಷ ರವೀಶ್ ತಂತ್ರಿ, ಮುಖಂಡರಾದ ಸತಿಶ್ಚಂದ್ರ ಭಂಡಾರಿ, ವಿಜಯ್ ಕುಮಾರ್ ರೈ, …

ನಿಷೇಧಿತ ಉತ್ಪನ್ನ ವಶಪಡಿಸಿ ದಂಡ ವಸೂಲಿ

ಕಾಸರಗೋಡು: ಸ್ಥಳೀಯಾಡಳಿತ ಇಲಾಖೆಯ ಜಿಲ್ಲಾ ಎನ್‌ಫೋರ್ಸ್ ಮೆಂಟ್ ಸ್ಕ್ವಾಡ್ ಮಧೂರು ಪಂಚಾಯತ್ ವ್ಯಾಪ್ತಿಯಲ್ಲಿ ನಡೆಸಿದ ತಪಾಸಣೆಯಲ್ಲಿ ಹೈಪರ್ ಮಾರ್ಕೆ ಟ್‌ನಲ್ಲಿ ಮಾರಾಟಕ್ಕಾಗಿ ತೆಗೆದಿರಿಸಿದ್ದ ಏಕಬಾರಿ ಉಪಯೋಗಿಸುವಂತಹ ನಿಷೇಧಿತ ಪ್ರೇಟ್‌ಗಳು, ಗ್ಲಾಸ್‌ಗಳನ್ನು ವಶಪಡಿಸಲಾಯಿತು. ಅಂಗಡಿ ಮಾಲಕನಿಗೆ 1೦,೦೦೦ ರೂ. ದಂಡ ಹೇರಲಾಯಿತು. ಮಧೂರು ಬ್ಯಾಂಕ್ ಮುಂಭಾಗದಲ್ಲಿರುವ ತ್ಯಾಜ್ಯಗಳನ್ನು ರಸ್ತೆಯಲ್ಲಿ ಕಿಚ್ಚಿರಿಸಿ ನಾಶಪಡಿಸಿದ ಹಿನ್ನೆಲೆಯಲ್ಲಿ 5೦೦೦ ರೂ. ದಂಡ ವಸೂಲು ಮಾಡಲಾಯಿತು. ಹಿದಾಯತ್‌ನಗರದ ಶಾಲೆ, ಅಪಾರ್ಟ್‌ಮೆಂಟ್‌ಗಳಿಂದ ಪತ್ತೆಹಚ್ಚಿದ ಅವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆಗೂ ದಂಡ ಹೇರಲಾಯಿತು. ಮಂಗಲ್ಪಾಡಿ ಪಂಚಾಯತ್‌ನ ಮೀಪಿರಿಯಲ್ಲಿರುವ ಕ್ವಾರ್ಟರ್ಸ್‌ಗಳಲ್ಲಿ, …

ಪ್ರಥಮವಾಗಿ ಜಿಲ್ಲೆಗೆ ತಲುಪುವ ಮುಖ್ಯಮಂತ್ರಿಯ ಕಾರ್ಯಕ್ರಮ ಯಶಸ್ವಿಗೊಳಿಸಲು ಡಿಸಿಸಿ ಸಿದ್ಧತೆ

ಕಾಸರಗೋಡು: ವಿವಿಧ ಕಾರ್ಯ ಕ್ರಮಗಳಲ್ಲಿ  ಭಾಗವಹಿಸುವುದಕ್ಕಾಗಿ ಪ್ರಥಮವಾಗಿ ಜಿಲ್ಲೆಗೆ ತಲುಪುವ ಮುಖ್ಯಮಂತ್ರಿ ವಿ.ಡಿ. ಸತೀಶನ್ ಭಾಗವಹಿಸುವ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಡಿಸಿಸಿ ಕಚೇರಿಯಲ್ಲಿ ಜರಗಿದ ಜಿಲ್ಲಾ ಕಾಂಗ್ರೆಸ್ ಸಮಿತಿ ನಾಯಕತ್ವ ಸಭೆ ತೀರ್ಮಾನಿಸಿದೆ. ಈ ತಿಂಗಳ 9, 1೦ರಂದು ಆರೋಗ್ಯ, ದೇವಸ್ವಂ ಇಲಾಖೆ ಸಚಿವ ಕೆ. ಮುರಳೀಧರನ್, 1೦ರಂದು ಸಾಂಸ್ಕೃತಿಕ, ಪ್ರವಾಸೋದಮ ಇಲಾಖೆ ಸಚಿವ ವಿಷ್ಣುನಾಥ್, ೧೬ರಂದು ಕೆಪಿಸಿಸಿ ಅಧ್ಯಕ್ಷ, ವಿದ್ಯುತ್ ಇಲಾಖೆ ಸಚಿವ ಸಣ್ಣಿ ಜೋಸೆಫ್, ೨೦ರಂದು ಸಹಕಾರಿ ವಾರಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಹಕಾರಿ, ಅಬಕಾರಿ ಇಲಾಖೆ …