10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ: ಪ್ರಕರಣ ದಾಖಲಿಸಿದ ರಾಜ್ಯ ಮಕ್ಕಳ ಹಕ್ಕು ಆಯೋಗ

ಕಾಸರಗೋಡು: ಚೆರುವತ್ತೂರು ಟೆಕ್ನಿಕಲ್ ಸ್ಕೂಲ್‌ನ 10ನೇ ತರಗತಿ ವಿದ್ಯಾರ್ಥಿ ನೀಲೇಶ್ವರ ತೈಕಡಪ್ಪುರ ಅಳಿತ್ತಲದ ನೀರಜ್ ಸಂತೋಷ್ (15) ಆತ್ಮಹತ್ಯೆಗೈದ ಘಟನೆಯ ಬಗ್ಗೆ ರಾಜ್ಯ ಮಕ್ಕಳ ಹಕ್ಕು ಆಯೋಗ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಈ ಬಾಲಕನ ಆತ್ಮಹತ್ಯೆಗೆ ಸಂಬಂಧಿಸಿ ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ಧಿಗಳ ಆಧಾರದಲ್ಲಿ ಆಯೋಗ ಈ ಪ್ರಕರಣ ದಾಖಲಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಶಿಕ್ಷಣ ಉಪನಿರ್ದೇಶಕರು ಹಾಗೂ ಜಿಲ್ಲಾ ಶಿಶು ಸಂರಕ್ಷಣಾ ಅಧಿಕಾರಿಗೆ ಆಯೋಗ ನಿರ್ದೇಶ ನೀಡಿದೆ. ನೀರಜ್ …

ಬಾಪಾಲಿಪೊನದಿಂದ ಯುವತಿ ನಾಪತ್ತೆ

ಬದಿಯಡ್ಕ: ಮನೆಯಿಂದ ಹೊರಗೆ ತೆರಳಿದ ಯುವತಿ ಮರಳಿ ಬಾರದೆ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ತಂದೆ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿ ದ್ದಾರೆ. ಮುಂಡಿತ್ತಡ್ಕ ಬಾಪಾಲಿಪೊನದ ಎ. ಯೂಸಫ್‌ರ ಪುತ್ರಿ ಹನ್ನತ್ ಬೀವಿ (30) ನಾಪತ್ತೆಯಾಗಿರುವುದಾಗಿ ತಿಳಿಸಲಾಗಿದೆ. ಗುರುವಾರ ರಾತ್ರಿ 9.30 ಗಂಟೆ ಬಳಿಕ  ಪುತ್ರಿ ಮನೆಯಿಂದ ನಾಪತ್ತೆಯಾಗಿರುವು ದಾಗಿ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಹಿರಿಯ ದೈವನರ್ತಕ ಅಡ್ರು ಕಾಯಿಮಲೆ ನಿಧನ

ಬೆಳ್ಳೂರು: ಹಿರಿಯ ದೈವನರ್ತಕ ಕಾಯಿಮಲೆ ನಿವಾಸಿ ಅಡ್ರು (65) ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಚಿಕಿತ್ಸೆಯಲ್ಲಿದ್ದರು. ಗ್ರಾಮದ ಅಜಲುಗಳಲ್ಲಿ ದೈವಾರಾಧನೆಗೆ ಮಹತ್ವ ನೀಡಿದ ಕುಟುಂಬ ಪರಂಪರೆಯವರಾಗಿದ್ದರು.  ವಿವಿಧ ಕಡೆಗಳಲ್ಲಿ ಕುಂಡಗರ ದೈವವನ್ನು ಕಟ್ಟುವುದರಲ್ಲಿ ಪ್ರಸಿದ್ಧರಾಗಿದ್ದರು. ಮೃತರು ಪತ್ನಿ ರಾಧಾ, ಮಕ್ಕಳಾದ ಮಹೇಶ, ಮಂಜೂಷ, ಸಹೋದರ ರಾಮ, ಸಹೋದರಿಯ ರಾದ ಸುಂದರಿ, ಜಾನಕಿ, ಕಮಲಾಕ್ಷಿ, ಪಾಚು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಇಬ್ಬರು ಯುವತಿಯರು ನಾಪತ್ತೆ: ತನಿಖೆ ತೀವ್ರ

ಕಾಸರಗೋಡು:  ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಇಬ್ಬರು ಯುವತಿಯರು ನಾಪತ್ತೆಯಾದ ಸಂಬಂಧ ಪೊಲೀಸರು ಕೇಸು ದಾಖಲಿಸಿ ತನಿಖೆ ತೀವ್ರಗೊಳಿಸಿದ್ದಾರೆ.  ಪಾಡಿ ಎಡನೀರಿನ ಆಯಿಶ ಶೆರೀಫ (18), ಪಾಡಿ ನಾಲ್ತಡ್ಕದ ಗೋಪಿನಾಥನ್‌ರ ಪತ್ನಿ ಕೀರ್ತನ (22) ಎಂಬಿವರು ನಾಪತ್ತೆಯಾಗಿ ದ್ದಾರೆ. ಆಯಿಷ ಶೆರೀಫ ಬುಧವಾರ ಸಂಜೆಯಿಂದ  ನಾಪತ್ತೆಯಾಗಿರು ವುದಾಗಿ ದೂರಲಾಗಿದೆ.  ವಿದ್ಯಾನಗರದ ಸುಜುಕಿ ಶೋರೂಂಗೆ ಹೋದ ಆಯಿಷ ಮರಳಿ ಮನೆಗೆ ತಲುಪಿಲ್ಲವೆಂದು ತಂದೆ ವಿದ್ಯಾನಗರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕೀರ್ತನ ಗುರುವಾರ ಸಂಜೆಯಿಂದ ನಾಪತ್ತೆಯಾಗಿದ್ದಾರೆ.  ಸಂಜೆ 3.30ಕ್ಕೆ …

ಮನೆಗೆ ಸಿಡಿಲಿನಾಘಾತ: ವ್ಯಾಪಕ ನಾಶನಷ್ಟ

ಕುಂಬಳೆ:  ಕಾಂಕ್ರೀಟ್ ಮನೆಗೆ ಸಿಡಿಲು ಬಡಿದು ವ್ಯಾಪಕ ನಾಶನಷ್ಟ ಸಂಭವಿಸಿದೆ. ಮನೆಯವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಕುಂಬಳೆ ದೇವಿನ ಗರದ  ರಾಜನ್ ಎಂಬವರ ಮನೆಗೆ  ನಿನ್ನೆ ಸಂಜೆ ಸಿಡಿಲಿನಾಘಾತವುಂ ಟಾಗಿದೆ.  ಮನೆಯ ಸ್ವಿಚ್ ಬೋರ್ಡ್ ಸಹಿತ ವಯರಿಂಗ್ ಉರಿದು ನಾಶಗೊಂ ಡಿದೆ.  ಇಲೆಕ್ಟ್ರೋನಿಕ್ ಉಪಕರಣ ಗಳು ಹಾನಿಗೀಡಾಗಿವೆ. ಗೋಡೆ ಯಲ್ಲಿ ಬಿರುಕುಬಿಟ್ಟಿದ್ದು, ಸಿಮೆಂಟಿನ ತುಂಡುಗಳು ಚದುರಲ್ಪಟ್ಟಿವೆ. ಈವೇಳೆ ರಾಜನ್,  ಪತ್ನಿ ಸುಲೋಚನ, ಮಕ್ಕಳಾದ ದೀಪಕ್, ದೀಕ್ಷಿತ್ ಮನೆಯೊಳಗಿದ್ದರು. ಭಾರೀ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಿಂದ ಹೊರಕ್ಕೆ …

ಎಂಡಿಎಂಎ ವಶ ಪ್ರಕರಣ : ಕಲ್ಲಿಕೋಟೆಯ ವೈದ್ಯ ಬಂಧನ

ಕಲ್ಪೆಟ್ಟ: ವಯನಾಡು ಲಕ್ಕಿಡಿ ಎಂಬಲ್ಲಿಂದ 8.520 ಗ್ರಾಂ ಎಂಡಿಎಂಎ ವಶಪಡಿಸಿ ಕೊಂಡ ಪ್ರಕರಣದಲ್ಲಿ ಖಾಸಗಿ ಆಸ್ಪತ್ರೆಯೊಂ ದರ ವೈದ್ಯನನ್ನು ಬಂಧಿಸಲಾಗಿದೆ. ಮಾದಕ ವಿರುದ್ಧ ಸ್ಕ್ವಾಡ್ ಹಾಗೂ ವೈತಿರಿ ಪೊಲೀಸರು ನಡೆಸಿದ ತನಿಖೆ ಯಲ್ಲಿ ಕಲ್ಲಿಕೋಟೆಯ ಖಾಸಗಿ ಸುಪರ್ ಸ್ಪೆಶಾಲಿಟಿ ಆಸ್ಪತ್ರೆಯೊಂ ದರ ಎಮರ್ಜೆನ್ಸಿ ಕ್ರಿಟಿಕಲ್ ಕೇರ್ ವಿಭಾಗದ ಮುಖ್ಯಸ್ಥನಾದ ಮಲಪ್ಪುರಂ ಮೊರಯೂರು ನಿವಾಸಿ  ಲವ್‌ಡೆಲ್ ವೀ ಟಿಲ್‌ನ  ಡಾ| ಕೆ.ಎನ್. ಮುಹ ಮ್ಮದ್ ಫಾಬಿನ್ ಸೆರೆಗೀಡಾಗಿ ದ್ದಾನೆ. ಈತ ನಿರಂತರ ಎಂಡಿಎಂಎ ಉಪಯೋಗಿಸು ತಿದ್ದ್ದ ನೆಂದು ಪೊಲೀಸರು …

ಕೃಷಿಕ ನಿಧನ

ಮುಳ್ಳೇರಿಯ: ಉತ್ತಮ ಕೃಷಿಕ ರಾಗಿದ್ದ ಆದೂರು ಕಾನಕ್ಕೋಡ್ ನಿವಾಸಿ ಪದ್ಮನಾಭ ರೈ (60) ನಿಧನ ಹೊಂದಿದರು. ಹೈನುಗಾರಿಕೆ ಯಲ್ಲಿಯೂ ತೊಡಗಿಸಿಕೊಂಡಿದ್ದ ಇವರು ಧಾರ್ಮಿಕ ರಂಗದಲ್ಲಿಯೂ ಸಕ್ರಿಯರಾಗಿ ದುಡಿಯುತ್ತಿದ್ದರು. ಕಾನಕ್ಕೋಡು ವನಶಾಸ್ತಾರ ಕ್ಷೇತ್ರದ ಸೇವಾ ಸಮಿತಿ ಪ್ರಧಾನ ಕಾರ್ಯ ದರ್ಶಿಯಾಗಿದ್ದರು. ದಿ| ಅಕ್ಕಾರಿ ರೈ- ದಿ| ರಾಧ ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ಉಷಾ, ಪುತ್ರಿ ಕೀರ್ತಿ, ಸಹೋದರರಾದ ಕೋಚಣ್ಣ ರೈ (ನಿವೃತ್ತ ವಿಜಯಬ್ಯಾಂಕ್ ಸೀನಿ ಯರ್ ಮೆನೇಜರ್), ಡಾ| ಶೇಷಪ್ಪ ರೈ (ನಿವೃತ್ತ ಪ್ರೊಫೆಸರ್), ಹರಿನಾಥ ರೈ …

ಯುವ ನಟಿ ಆರೋಪಿಯಾದ ಆಕ್ರಮಣ ಕೇಸು: 50ರ ಹರೆಯದ ಮಹಿಳೆಯನ್ನು ಮಾನಭಂಗಗೈದ ಡಾಕ್ಟರ್‌ನ ಫೋನ್‌ನಲ್ಲಿ ಅಶ್ಲೀಲ ದೃಶ್ಯಗಳು ಪತ್ತೆ: ತಲೆಮರೆಸಿಕೊಂಡ ಡಾಕ್ಟರ್

ಕೊಚ್ಚಿ: ಯುವನಟಿಯ ಸಂಬಂಧಿಕೆಯನ್ನು ದೌರ್ಜನ್ಯಗೈದ ಪ್ರಕರಣದಲ್ಲಿ ಆರೋಪಿಯಾದ ಡಾಕ್ಟರ್ ಜೋನ್ಸನ್ ಜೆ. ವರ್ಗೀಸ್‌ನ ಫೋನ್‌ನಲ್ಲಿ ಅಶ್ಲೀಲ ದೃಶಗಳು ಪತ್ತೆಯಾಗಿದೆ. ೧೨ ಮಹಿಳೆಯರ ಜೊತೆಗಿರುವ ಈತನ ಖಾಸಗಿ ದೃಶ್ಯಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಇನ್ನಷ್ಟು ಹೆಚ್ಚು ಮಹಿಳೆಯರೊಂದಿಗೆ ಈತನಿಗೆ ಸಂಪರ್ಕವಿದೆಯೋ, ಪ್ರಕರಣದಲ್ಲಿ ಇನ್ನೂ ದೂರುದಾರರಿದ್ದಾರೆಯೇ, ಫೋನ್‌ನಲ್ಲಿ ಯಾವುದಾದರೂ ದೃಶ್ಯಗಳನ್ನು ಡಿಲೀಟ್ ಮಾಡಲಾಗಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವತಿಯರೊಂದಿಗಿರುವ ಖಾಸಗಿ ಸಂಪರ್ಕಗಳನ್ನು ಡಾಕ್ಟರ್ ಮೊಬೈಲ್‌ನಲ್ಲಿ ಚಿತ್ರೀಕರಿಸಿ ತೆಗೆದಿರಿಸಿರುವುದಾಗಿ ಪೊಲೀಸರು ತಿಳಿಸುತ್ತಾರೆ. ಇದರಲ್ಲಿ ಒಳಗೊಂಡ ಯುವತಿಯರ ದೂರು ಲಭಿಸಿದರೆ ಡಾಕ್ಟರ್ …

ಚೂರಲ್ಮಲ ದುರಂತದಲ್ಲಿ ಅನಾಥೆಯಾದ ಶ್ರುತಿ ಗುರುವಾಯೂರಿನಲ್ಲಿ ದಾಂಪತ್ಯ ಜೀವನಕ್ಕೆ

ಕಲ್ಪಟ್ಟ: ವಯನಾಡು ಚೂರಲ್ಮಲದಲ್ಲಿ ಗುಡ್ಡೆ ಜರಿದು ಸಂಬಂಧಿಕರನ್ನು ಕಳೆದುಕೊಂಡು ಅನಾಥಳಾದ ಶ್ರುತಿ ಸುರೇಶ್ ವಿವಾಹಿತೆಯಾದರು. ವಯನಾಡು ಕಲೆಕ್ಟ್ರೇಟ್‌ನ ರೆವೆನ್ಯೂ ವಿಭಾಗ ನೌಕರನಾಗಿರುವ ಸಂದೀಪ್ ಶಂಕರ್ ಪತಿಯಾಗಿದ್ದಾರೆ. ಗುರುವಾಯೂರು  ಕ್ಷೇತ್ರದಲ್ಲಿ ಇಂದು ಬೆಳಿಗ್ಗೆ ವಿವಾಹ ನಡೆದಿದೆ. ಕಿಳಕ್ಕೇನಡೆಯ 1ನೇ ನಂಬ್ರ ಮಂಟಪದಲ್ಲಿ ಇವರಿಬ್ಬರು ವಿವಾಹವಾಗಿದ್ದಾರೆ. ಪೋಷಕರ ಸ್ಥಾನದಲ್ಲಿ ನಿಂತು ಎಲ್ಲಾ ಕಾರ್ಯಗಳಿಗೂ ಮೇಲ್ನೋಟ ವಹಿಸಿದ್ದು ಮಾಜಿ ಕಂದಾಯ ಸಚಿವ ಕೆ. ರಾಜನ್ ಆಗಿದ್ದಾರೆ.  ಜೊತೆಯಲ್ಲೇ ಕೆಲಸ ಮಾಡುವ ವ್ಯಕ್ತಿಯ ಕೈಗೆ ಈಕೆಯನ್ನು ನೀಡಿದಾಗ ಬಹಳ ಸಂತೋಷವಾಗುತ್ತದೆ ಎಂದು ರಾಜನ್ …

ತ್ಯಾಜ್ಯ ಸಮಸ್ಯೆ: ಬದಿಯಡ್ಕ ಪಂಚಾಯತ್‌ನ ವಿವಿಧೆಡೆ ಕ್ಯಾಮರಾ ಸ್ಥಾಪನೆಗೆ ಸ್ಥಳ ಪರಿಶೀಲನೆ

ಬದಿಯಡ್ಕ: ಬದಿಯಡ್ಕ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ಎಸೆಯುವ ಆಯ್ದ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಆಡಳಿತ ಸಮಿತಿ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಲಾಯಿತು. ಸಾರ್ವಜನಿಕ ಸ್ಥಳಗಳು ಹಾಗೂ ರಸ್ತೆ ಬದಿಗಳಲ್ಲಿ ಉಪಯೋಗಶೂನ್ಯ ವಸ್ತುಗಳು ಮತ್ತು ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಚೆಲ್ಲುವ ಸ್ಥಳಗಳನ್ನು ಗುರುತಿಸಿ, ಕ್ಯಾಮೆರಾ ಸ್ಥಾಪಿಸಲು ಪಂ. ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಪಂ. ಅಧ್ಯಕ್ಷ ಡಿ. ಶಂಕರ ಅವರ ನೇತೃತ್ವದಲ್ಲಿ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಯಿತು. ಈ …