ಪೆರಡಾಲ ಸರಕಾರಿ ಶಾಲೆಯ ಶತಮಾನೋತ್ಸವ ಕಚೇರಿ ಉದ್ಘಾಟನೆ
ಬದಿಯಡ್ಕ: ಪೆರಡಾಲ ಸರಕಾರಿ ಪ್ರೌಢಶಾಲೆಯ ಶತಮಾನೋತ್ಸವ ಆಚರಣೆಗೆ ಸಿದ್ಧತೆ ಆರಂಭಗೊಂಡಿದೆ. ಇದರಂಗವಾಗಿ ಆಚರಣಾ ಸಮಿತಿ ಕಚೇರಿಯನ್ನು ಬದಿಯಡ್ಕ ತುಳು ಭವನದಲ್ಲಿ ಶಾಸಕ ಕಲ್ಲಟ್ರ ಮಾಹಿನ್ ಉದ್ಘಾಟಿಸಿದರು. ಪಂಚಾಯತ್ ಅಧ್ಯಕ್ಷ ಡಿ. ಶಂಕರ ಅಧ್ಯಕ್ಷತೆ ವಹಿಸಿದ್ದರು. ಶತಮಾನೋತ್ಸವ ಸಮಿತಿ ಪ್ರಧಾನ ಸಂಚಾಲಕ ಮಾಹಿನ್ ಕೇಳೋಟ್ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಸದಸ್ಯ ರಾಮಪ್ಪ ಮಂಜೇಶ್ವರ, ಬ್ಲೋಕ್ ಪಂ. ಸದಸ್ಯ ಖಾದರ್ ಮಾನ್ಯ, ಕುಂಬಳೆ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಅಶೋಕನ್ ಎಂ., ಮುಖ್ಯೋಪಾಧ್ಯಾಯಿನಿ ಸೌರಭ, ಅಶ್ರಫ್ ಪಳ್ಳಿಕಂಡಂ ಮಾತನಾಡಿದರು. ಸಂಚಾಲಕ ಖಾಲಿದ್ …