ಪಚ್ಚಂಬಳದಲ್ಲಿ ನಾಲ್ವರಿಗೆ ಇರಿದು ಗಾಯಗೊಳಿಸಿದ ಪ್ರಕರಣ: ಹಲವು ಪ್ರಕರಣಗಳಲ್ಲಿ ಆರೋಪಿಯಾದ ಓರ್ವ ಸೆರೆ;ಇನ್ನೋರ್ವನಿಗಾಗಿ ಶೋಧ
ಕುಂಬಳೆ: ಪಚ್ಚಂಬಳ ಸಫಾ ನಗರದ ಮುಹಮ್ಮದ್ (63)ಸಹಿತ ನಾಲ್ಕು ಮಂದಿಗೆ ಇರಿದು ಗಾಯಗೊಳಿಸಿದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಚ್ಚಂಬಳ ನೀರ್ಜಾಲ್ ನವಾಸ್ ಮಂಜಿಲ್‌ನ ಅಬ್ದುಲ್ ಇರ್ಷಾದ್ ಯಾನೆ ಲುಟಾಪಿ ಇರ್ಷಾದ್ (34) ಬಂಧಿತ ಆರೋಪಿಯಾಗಿದ್ದಾನೆ. ಈ ತಿಂಗಳ ೪ರಂದು ಮುಂಜಾನೆ 1 ಗಂಟೆಗೆ ಘಟನೆ ನಡೆದಿತ್ತು. ಮನೆಯಲ್ಲಿ ನಿದ್ರಿಸಿದ್ದ ಮುಹಮ್ಮದ್‌ರನ್ನು ಕರೆದೆಬ್ಬಿಸಿ ಅಬ್ದುಲ್ ಇರ್ಷಾದ್ ಹಾಗೂ ಸಹೋದರ ದಿಲ್ಶಾದ್ ಇರಿದು ಗಂಭೀರಗಾಯಗೊಳಿಸಿರು ವುದಾಗಿ ದೂರಲಾಗಿದೆ. ಮುಹಮ್ಮದ್‌ರಿಗೆ ಇರಿಯುವುದನ್ನು ತಡೆಯಲೆತ್ನಿಸಿದ ಸಫಾ ನಗರದ ಎಸ್.ಎ ಶೆರೀಫ್, …