24.79 ಲಕ್ಷ ರೂ. ಕಾಳಧನ ವಶ
ಕಾಸರಗೋಡು: ಸರಿಯಾದ ದಾಖಲುಪತ್ರಗಳಿಲ್ಲದೆ ಕಾರಿನಲ್ಲ್ಲಿ ಸಾಗಿಸುತ್ತಿದ್ದ 24.79 ಲಕ್ಷ ರೂ. ಕಾಳಧನವನ್ನು ಹೊಸದುರ್ಗ ಪೊಲೀಸರು ಪತ್ತೆಹಚ್ಚಿ ವಶಪಡಿ ಸಿಕೊಂಡಿದ್ದಾರೆ.ಇದಕ್ಕೆ ಸಂಬಂ ಧಿಸಿ ಪಳ್ಳಿಕ್ಕೆರೆ ಕಲ್ಲಿಂಗಾಲ್ ನಿವಾಸಿ ಶಂಸು ಅಲಿಯಾಸ್ ಸನಾ ಶಂಸು (62) ಎಂಬಾತ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹೊಸದುರ್ಗ ಡಿವೈಎಸ್ಪಿ ಬಾಬು ಪೆರಿಂಙೋತ್ತ್ ನೀಡಿದ ನಿರ್ದೇಶದಂತೆ ಹೊಸದುರ್ಗ ಪೊಲೀಸ್ ಠಾಣೆಯ ಎಸ್ ಐ ವಿ.ಪಿ. ಅಖಿಲ್ರ ನೇತೃತ್ವದ ತಂಡ ಹೊಸದುರ್ಗದ ಮಡಿಯನ್ನಲ್ಲಿ ಈ ಕಾರ್ಯಾ ಚರಣೆ ನಡೆಸಿ ಮಾಲನ್ನು ವಶಪಡಿಸಿಕೊಂಡಿದೆ.