3 ಲಕ್ಷ ಜನರೊಂದಿಗೆ ಯೋಗ ಮಾಡಿ ಹೊಸ ದಾಖಲೆ ಸೃಷ್ಟಿಸಿದ ಪ್ರಧಾನಿ: ಉದ್ವಿಗ್ನತೆ, ಅಶಾಂತಿಯ ಈ ಸಮಯದಲ್ಲಿ ಯೋಗ ಶಾಂತಿ ನೀಡುತ್ತದೆ-ಪ್ರಧಾನಿ ಮೋದಿ

ವಿಶಾಖಪಟ್ಟಣ: ಇಂದು ಅಂತಾ ರಾಷ್ಟ್ರೀಯ ಯೋಗ ದಿನಾಚರಣೆ ಯಾಗಿದೆ. ಇದರ ಅಂಗವಾಗಿ ಆಂಧ್ರಪ್ರದೇಶದ ವಿಶಾಖಪಟ್ಟಣದ ಸಮುದ್ರ ತೀರದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಮೂರು ಲಕ್ಷ ಮಂದಿಯೊಂದಿಗೆ ಯೋಗ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿ ದ್ದಾರೆ. ಇಂದು ವಿಶ್ವದಾದ್ಯಂತವಾಗಿ 11ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ವಿಶಾಖಪಟ್ಟಣ ಸಮುದ್ರದ ತೀರದಲ್ಲಿ  ಯೋಗ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಇಂದು ಬೆಳಿಗ್ಗೆ 6.30ಕ್ಕೆ ಆರಂಭಗೊಂಡ ಯೋಗ ದಿನಾಚರಣೆಯಲ್ಲಿ ಪ್ರಧಾನಮಂತ್ರಿ ಮೋದಿಯವರ ಜೊತೆ ಮೂರು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದರು. ವಿಶಾಖಪಟ್ಟಣದ ಆರ್.ಕೆ. ಬೀಚ್‌ನಿಂದ ಭೋಗಪುರಂ ವರೆಗೆ 26 ಕಿ.ಮೀ ಉದ್ದದ ಕಾರಿಡಾರ್‌ನಲ್ಲಿ  ಯೋಗ ದಿನ  ವ್ಯವಸ್ಥೆ ಮಾಡಲಾಗಿತ್ತು.

ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸೇರಿ ಹಲವು ಗಣ್ಯರು ಪ್ರಧಾನಿ ಜತೆ ಯೋಗ ಮಾಡಿದರು. ಇದರಲ್ಲಿ 25,೦೦೦ ಬುಡಕಟ್ಟು ವಿದ್ಯಾರ್ಥಿಗಳು ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರನ್ನು  ಆಂಧ್ರ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ   ಜನಸಾಗರವನ್ನು ಉದ್ದೇಶಿಸಿ ಮೋದಿ  ಮಾತನಾಡಿದರು.  ಮನುಷ್ಯ ಶಿಸ್ತುಬದ್ದ ಜೀವನ ನಡೆಸಲು ಹಾಗೂ ಮಾನಸಿಕ, ದೈಹಿಕ ಆರೋಗ್ಯ ಕಾಪಾಡಲು ಯೋಗ ಸಹಾಯಕಾರಿಯಾಗಿದೆ. ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಧ್ಯೇಯವಾಕ್ಯದಡಿ ವಿಶ್ವ ಯೋಗ ದಿನ ಆಚರಿಸಲಾಗುತ್ತಿದೆ. ಯೋಗ ಎಂದರೆ ಎಲ್ಲರೂ ಒಂದಾಗುವುದು ಎಂದರ್ಥ. ಇಡೀ ವಿಶ್ವವೇ ಯೋಗ ದಿನ ಆಚರಿಸುವುದು ಸಾಧಾರಣ ವಿಷಯವಲ್ಲ. ವಿಶ್ವದ ಕೋಟ್ಯಂತರ ಜನರ ಜೀವನ ಶೈಲಿಯನ್ನು ಯೋಗ ಬದಲಿಸಿದೆ.  ಆದ್ದರಿಂದ ಯೋಗ ವಿಶ್ವದ ಕೋಟ್ಯಂತರ ಜನರ ಜೀವನ ಶೈಲಿಯ ಭಾಗವಾಗಿದೆ. ಒಬ್ಬರಿಗಾಗಿ ಅಲ್ಲ ಎಲ್ಲರಿಗಾಗಿ  ಯೋಗ ಎಂದು ಪ್ರಧಾನಿ ಮೋದಿ ಹೇಳಿದರು.

Leave a Reply

Your email address will not be published. Required fields are marked *

You cannot copy content of this page