4 ಲೀಟರ್ ಕರ್ನಾಟಕ ಮದ್ಯ ವಶ

ಕಾಸರಗೋಡು: ನಗರದ ಬೀರಂತಬೈಲಿನಲ್ಲಿ ಕಾಸರಗೋಡು ರೇಂಜ್ ಎಕ್ಸೈಸ್ ಇನ್ಸ್‌ಪೆಕ್ಟರ್ ಜೋಸೆಫ್ ಜಿ.ಯುರ ನೇತೃತ್ವದ ತಂಡ ನಡೆಸಿದ ದಾಳಿಯಲ್ಲಿ ೪.೫ ಲೀಟರ್ (೧೮೦ ಎಂಎಲ್‌ನ ೨೫ ಪ್ಯಾಕೆಟ್) ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿದೆ.

ಇದಕ್ಕೆ ಸಂಬಂಧಿಸಿ ಕಾಸರಗೋಡು ಕಡಪ್ಪುರದ ಬಾಬು ಕೆ. ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ ಉಣ್ಣಿಕೃಷ್ಣನ್ ಕೆ., ಪ್ರಿವೆಂಟಿವ್ ಆಫೀಸರ್ ಪ್ರಶಾಂತ್ ಪಿ, ಸಿಇಒ ಶ್ಯಾಮ್‌ಜಿತ್ ಒಳಗೊಂಡಿದ್ದಾರೆ.

RELATED NEWS

You cannot copy contents of this page