510 ಪ್ಯಾಕೆಟ್ ತಂಬಾಕು ಉತ್ಪನ್ನ ವಶ: ಓರ್ವ ಸೆರೆ
ಕುಂಬಳೆ: ಮಾರಾಟಕ್ಕಾಗಿ ಸಾಗಿಸುತ್ತಿದ್ದ 510 ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಬಾಡೂರು ಚಾವ ಹೌಸ್‌ನ ಅಬ್ದುಲ್ ಖಾದರ್ (38) ಎಂಬಾತನನ್ನು ಬಂಧಿಸಲಾಗಿದೆ. ಕುಂಬಳೆ ಎಸ್.ಐ. ಉಮೇಶ್ ನೇತೃತ್ವದ ಪೊಲೀಸರು ನಿನ್ನೆ ಸಂಜೆ ಕಟ್ಟತ್ತಡ್ಕ ಮುಂಡಕ್ಕಾನದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಅಬ್ದುಲ್ ಖಾದರ್ ಪ್ಲಾಸ್ಟಿಕ್ ಚೀಲದಲ್ಲಿ ತಂಬಾಕು ಉತ್ಪನ್ನಗಳೊಂದಿಗೆ ರಸ್ತೆ ಬದಿ ನಿಂತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.