60 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಟಾಟಾ ಕೋವಿಡ್ ಆಸ್ಪತ್ರೆಯನ್ನು ಕೆಡವಲು ತೀರ್ಮಾನ
ಕಾಸರಗೋಡು: ಚೆಮ್ನಾಡ್ ಪಂಚಾಯತ್‌ನ ಚಟ್ಟಂಚಾಲ್‌ನಲ್ಲಿ ಕೋವಿಡ್ ಮಹಾಮಾರಿ ಕಾಲದಲ್ಲಿ ಕೋವಿಡ್ ಚಿಕಿತ್ಸೆ ನೀಡಲು 60 ಕೋಟಿ ರೂ. ವ್ಯಯಿಸಿ ನಿರ್ಮಿಸಲಾದ ಟಾಟಾ ಕೋವಿಡ್ ಆಸ್ಪತ್ರೆಯನ್ನು ಕೆಡವಲು ರಾಜ್ಯ ಸರಕಾರ ತೀರ್ಮಾನಿಸಿದೆ. ಈ ಆಸ್ಪತ್ರೆಗೆ 30 ವರ್ಷದ ಆಯಸ್ಸಿನ ವಾಗ್ದಾನ ನೀಡಲಾಗಿತ್ತು. 2020 ಅಕ್ಟೋಬರ್‌ನಲ್ಲಿ ಕಾರ್ಯಾರಂಭಗೊಂ ಡಿದ್ದ ಈ ಆಸ್ಪತ್ರೆಯನ್ನು ನಿಗದಿತ 30 ವರ್ಷಗಳ ಆಯಸ್ಸಿನ ಬದಲು ಕೇವಲ ಮೂರು ವರ್ಷದೊಳಗೆ ಈಗ ಮುರಿಯಬೇಕಾಗಿ ಬಂದಿದೆ. ಈ ಆಸ್ಪತ್ರೆ ಇತ್ತೀಚೆಗೆ ಹಾನಿಗೊಳ್ಳುವತ್ತ ಸಾಗತೊಡ ಗಿತ್ತು. ಬಿಸಿ ವಾತಾವರಣಕ್ಕೆ ಹೊಂದಿ ಕೊಳ್ಳಲು ಸಾಧ್ಯವಾಗದ ಫ್ಯಾಬ್ರಿಕೇಶನ್ ನಿರ್ಮಿತಿಯೇ ಇದು ಹಾನಿಗೊಳ್ಳ ತೊಡಗಿರುವುದರ ಪ್ರಧಾನ ಕಾರಣ ವಾಗಿದೆ ಎಂದು ಸಂಬಂಧಪಟ್ಟವರು ಹೇಳುತ್ತಿದ್ದಾರೆ. ಟಾಟಾ ಕಂಪೆನಿಯ ಸಿ.ಎಸ್.ಆರ್ ಫಂಡ್‌ನಲ್ಲಿ ಒಳಪಡಿಸಿ 4.12 ಎಕ್ರೆ ಜಾಗದಲ್ಲಿ 81,000 ಸ್ಕ್ವಾರ್ ಫೀಟ್ ವಿಸ್ತೀರ್ಣದಲ್ಲಿ ಫ್ಯಾಬ್ರಿಕೇಶನ್ ತಂತ್ರಜ್ಞಾನ ಬಳಸಿ 125 ಕಂಟೈನರ್‌ಗಳನ್ನು ಉಪಯೋಗಿಸಿ ಈ ಆಸ್ಪತ್ರೆ ನಿರ್ಮಿಸಲಾಗಿತ್ತು. ಈ ಆಸ್ಪತ್ರೆ ಕಟ್ಟಡವನ್ನು ಕೆಡಹುವ ಹೊಣೆಗಾರಿಕೆ ಯನ್ನು ಈಗ ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯ ರ್‌ಗೆ ರಾಜ್ಯ ಸರಕಾರ ವಹಿಸಿಕೊಟ್ಟಿದೆ.
ಟಾಟಾ ನಿಧಿಯ ಹೊರತಾಗಿ ಈ ಆಸ್ಪತ್ರೆಗೆ ವಿದ್ಯುತ್ ಮತ್ತು ರಸ್ತೆ ಸೌಕ ರ್ಯ ಏರ್ಪಡಿಸಲು ರಾಜ್ಯ ಸರಕಾರವೂ ೧೨ ಕೋಟಿ ರೂ. ವ್ಯಯಿಸಿತ್ತು. ಟಾಟಾ ಕೋವಿಡ್ ಆಸ್ಪತ್ರೆಯನ್ನು ಕೆಡಹಿದ ಬಳಿಕ ಆ ಜಾಗದಲ್ಲಿ ೨೩ ಕೋಟಿ ರೂ. ವ್ಯಯಿಸಿ ಹೊಸ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.