8.64 ಲೀಟರ್ ಕರ್ನಾಟಕ ಮದ್ಯ ವಶ
ಕಾಸರಗೋಡು: ಕಾಸರಗೋಡು ತಾಳಿಪಡ್ಪುನಲ್ಲಿ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 8.64 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿದೆ. ಈ ಮಾಲು ಬಚ್ಚಿಟ್ಟ ಸ್ಥಿತಿಯಲ್ಲಿತ್ತು. ಕರ್ನಾಟಕ ಅಬಕಾರಿ ಸರ್ಕಲ್ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಜನಾರ್ದನನ್ ಕೆ.ಯು.ರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಈ ಬಗ್ಗೆ ಕಾಸರಗೋಡು ರೇಂಜ್ ಅಬಕಾರಿ ಕಚೇರಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.