80 ಲೀಟರ್ ವಾಶ್, ಕಳ್ಳಭಟ್ಟಿ ಸಾರಾಯಿ ವಶ
ಬದಿಯಡ್ಕ: ಸ್ಟ್ರೈಕಿಂಗ್ ಫೋರ್ಸ್ನ ಅಂಗವಾಗಿ ಬದಿಯಡ್ಕ ಎಕ್ಸೈಸ್ ರೇಂಜ್ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ ದಿನೇಶನ್ ಕೆ. ನೇತೃತ್ವದ ಅಬಕಾರಿ ತಂಡ ಪೆರಿಯಡ್ಕ ಅರಣ್ಯದ ಬಳಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೮೦ ಲೀಟರ್ ವಾಶ್ (ಹುಳಿರಸ) ಮತ್ತು ಎರಡು ಲೀಟರ್ ಕಳ್ಳಭಟ್ಟಿ ಸಾರಾಯಿ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಐ.ಬಿ. ಪ್ರಿವೆಂಟೀವ್ ಆಫೀಸರ್ ಜೇಕಬ್ ಎಸ್, ಪ್ರಿವೆಂಟೀವ್ ಆಫೀಸರ್ ರವೀಂದ್ರನ್ ಎಂ.ಕೆ, ಸಿಇಒಗಳಾದ ಮನೋಜ್ ಪಿ, ಜನಾರ್ದನನ್ ಎಸ್, ಚಾಲಕ ರಾಧಾಕೃಷ್ಣನ್ ಎಂ.ಕೆ ಎಂಬವರು ಒಳಗೊಂಡಿದ್ದರು.