9.12 ಲಕ್ಷ ರೂ. ಕಾಳಧನ ವಶ
ಕಾಸರಗೋಡು: ಸರಿಯಾದ ದಾಖಲುಪತ್ರಗಳಿಲ್ಲದೆ ಸ್ಕೂಟರ್ ನಲ್ಲಿ ಸಾಗಿಸುತ್ತಿದ್ದ 9.12 ಲಕ್ಷ ರೂ. ಕಾಳಧನವನ್ನು ಚಂದೇರ ಪೊಲೀಸ್ ಠಾಣೆಯ ಎಸ್‌ಐ ಕೆ.ಪಿ.ಸತೀಶ್ ಮತ್ತು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯ ಸ್ಪೆಷಲ್ ಸ್ಕ್ವಾಡ್ ಒಳಗೊಂಡ ಪೊಲೀಸರ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಪಡನ್ನ ನಿವಾಸಿ ಮುಹಮ್ಮದ್ ಹಾಶಿಂ ಎಂಬಾತನಿಂದ ಈ ಹಣ ವಶಪಡಿಸಲಾಗಿದೆ. ಪೊಲೀಸರು ನಿನ್ನೆ ಪಡನ್ನ ಎಂಆರ್‌ಎಎಸ್‌ಎಸ್ ರಸ್ತೆಯಲ್ಲಿ ನಡೆಸಿದ ಕಾರ್ಯಾಚರ ಣೆಯಲ್ಲಿ ಹಣವನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ.