9 ವರ್ಷದ ಬಾಲಕಿಗೆ ಟ್ಯೂಶನ್ ಅಧ್ಯಾಪಿಕೆಯಿಂದ ಹಲ್ಲೆ: ಕೇಸು ದಾಖಲು
ಕಾಸರಗೋಡು: ಕಾಞಂಗಾಡ್ನಲ್ಲಿ ನಾಲ್ಕನೇ ತರಗತಿಯಾದ ವಿದ್ಯಾರ್ಥಿನಿಗೆ ಬೆತ್ತದಿಂದ ಹೊಡೆದು ಗಾಯಗೊಳಿಸಿದ ಟ್ಯೂಶನ್ ಅಧ್ಯಾಪಿಕೆ ವಿರುದ್ಧ ಕೇಸು ದಾಖಲಿಸಲಾಗಿದೆ. ಅಜಾನೂರಿನ ಸೂರ್ಯ (22) ವಿರುದ್ಧ ಭಾರತೀಯ ನ್ಯಾಯಸಂಹಿತೆ 118(1) ಕಾಯ್ದೆಯಂತೆ ಬೆತ್ತದಿಂದ ಹೊಡೆದಿರುವುದಕ್ಕೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. ನಿನ್ನೆ ಬೆಳಿಗ್ಗೆ ಮಗುವಿನ ಹಾಗೂ ಮನೆಯವರ ಸಮಗ್ರ ಹೇಳಿಕೆ ದಾಖಲಿಸಿದ ಬಳಿಕ ಪೊಲೀಸರು ಎಫ್ಐಆರ್ ರಿಜಿಸ್ಟರ್ ಮಾಡಿದ್ದಾರೆ. ಕಾಞಂಗಾಡ್ ತೀರ ಪ್ರದೇಶದ 9ರ ಬಾಲಕಿಗೆ ಆದಿತ್ಯವಾರ ಅಧ್ಯಾಪಿಕೆ ಬೆತ್ತದಿಂದ ಹೊಡೆದಿರುವುದಾಗಿ ದೂರಲಾಗಿದೆ. ಅಂದು ಸಂಜೆ ೪ ಗಂಟೆಗೆ ಟ್ಯೂಶನ್ಗೆ ಬಾಲಕಿ ತೆರಳಿದ್ದು, ಮನೆಗೆ ಹಿಂತಿರುಗುವಾಗ ದೇಹದಲ್ಲಿ ಬೆತ್ತದಿಂದ ಹೊಡೆದ ಗಾಯ ಕಂಡುಬಂದಿತ್ತು. ನೋವಿನಿಂದ ಬಾಲಕಿ ಅಸ್ವಸ್ಥಳಾದ ಹಿನ್ನೆಲೆಯಲ್ಲಿ ತಾಯಿ ಪೊಲೀಸರಿಗೆ ದೂರು ನೀಡಿದ್ದರು.