900 ಗ್ರಾಂ ಗಾಂಜಾ ಸಹಿತ ಓರ್ವ ಸೆರೆ
ಕಾಸರಗೋಡು: ಕಾಸರ ಗೋಡು ಬ್ಯಾಂಕ್ ರಸ್ತೆ ಬಳಿಯ ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣ ಪರಿಸರ ದಲ್ಲಿ ಕಾಸರಗೋಡು ಪೊಲೀಸ್ ಠಾಣೆಯ ಎಸ್‌ಐ ಪಿ. ಅನೂಪ್ ನೇತೃತ್ವದ ಪೊಲೀಸರ ತಂಡ ನಿನ್ನೆ ರಾತ್ರಿ ನಡೆಸಿದ ಕಾರ್ಯಾ ಚರಣೆಯಲ್ಲಿ 900 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿ ಕೊಂಡಿದೆ.
ಇದಕ್ಕೆ ಸಂಬಂಧಿಸಿ ಕಣ್ಣೂರು ಪುದಿಯಂಙಾಡು ಮಾಡಾಯಿ ನಿವಾಸಿ ಮೊಹಮ್ಮದ್ ಅನಸ್ (24) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈತ ಗಾಂಜಾ ವನ್ನು ಕಾಸರಗೋಡಿನ ಯಾರಿಗೋ ಹಸ್ತಾಂತರಿಸಲು ತಂದಿದ್ದನೆಂದು ಶಂಕಿಸಲಾಗುತ್ತಿ ದೆಯೆಂದು ಪೊಲೀ ಸರು ತಿಳಿಸಿದ್ದಾರೆ. ಆದ್ದರಿಂದ ಆಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಕ್ಕಾಗಿ ಬಂಧಿತನನ್ನು ಪೊಲೀಸರು ಇನ್ನಷ್ಟು ವಿಚಾರಣೆಯಲ್ಲಿ ತೊಡಗಿದ್ದಾರೆ.