ಕುಸಿದು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವ ಕೃಷಿಕ ಮೃತ್ಯು

ಬದಿಯಡ್ಕ: ಮನೆಯಲ್ಲಿ ಕುಸಿದು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವ ಕೃಷಿಕ ಮೃತಪಟ್ಟರು.

ಕುಂಬ್ಡಾಜೆ ಏತಡ್ಕ ನಿವಾಸಿ ರಾಧಾಕೃಷ್ಣ ಭಟ್‌ರ ಪುತ್ರ ಪ್ರಜ್ವಲ್ (26) ಮೃತಪಟ್ಟ ವ್ಯಕ್ತಿ. ಇವರು ಮೊನ್ನೆ ರಾತ್ರಿ ಮನೆಯಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಪುತ್ತೂರಿನ ಆಸ್ಪತ್ರೆಗೆ ತಲುಪಿಸಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟರು. ಬದಿಯಡ್ಕ ಪೊಲೀಸರು ಮೃತದೇಹದ ಮಹಜರು ನಡೆಸಿದ ಬಳಿಕ ಮನೆ ಹಿತ್ತಿಲಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಮೃತರು ತಂದೆ, ತಾಯಿ ಪ್ರೇಮಲತ, ಸಹೋದರಿ ಪ್ರತೀಕ್ಷ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page