ಆರಿಕ್ಕಾಡಿ ನಿವಾಸಿ ದುಬಾಯಿಯಲ್ಲಿ ಕುಸಿದು ಬಿದ್ದು ಮೃತ್ಯು
ಕುಂಬಳೆ: ಆರಿಕ್ಕಾಡಿ ನಿವಾಸಿ ಯೊಬ್ಬರು ದುಬಾಯಿಯಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಆರಿಕ್ಕಾಡಿ ಕಡವತ್ನ ದಿ| ಅಂದುಕಾಯಿಂಞಿ ಎಂಬವರ ಪುತ್ರ ಕಾಸಿಂ (43) ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ ದುಬಾಯಿ ವಾಸಸ್ಥಳದಲ್ಲಿ ಕುಸಿದು ಬಿದ್ದು ಮೃತಪಟ್ಟಿರುವುದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ. ಕೆಲವು ವರ್ಷ ಗಳಿಂದ ದುಬಾಯಿಯಲ್ಲಿರುವ ಇವರು 1 ವರ್ಷ ಹಿಂದೆ ಊರಿಗೆ ಬಂದು ಮರಳಿದ್ದರು. ಮೃತರು ತಾಯಿ ನಫೀಸ, ಪತ್ನಿ ರಿಹಾನ, ಮಕ್ಕಳಾದ ರಹೀಬ, ರಾಯಿಸ್, ಸಹೋದರ- ಸಹೋದರಿಯರಾದ ಮೊಹಮ್ಮದ್ ಕುಂಞಿ, ಕಾತಿಂ, ಬಡುವನ್ ಕುಂಞಿ, ನಸೀರ್, ಇಬ್ರಾಹಿಂ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಊರಿಗೆ ತರಲು ಪ್ರಯತ್ನ ನಡೆಯುತ್ತಿದೆಯೆಂದು ಸಂಬಂಧಿಕರು ತಿಳಿಸಿದ್ದಾರೆ.