ಹೊಸಂಗಡಿಯಲ್ಲಿ ಕಾರು-ಟೆಂಪೋ ಢಿಕ್ಕಿ: ಓರ್ವ ಮೃತ್ಯು
ಮಂಜೇಶ್ವರ: ಹೊಸಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಅಪರಾಹ್ನ ಸಂಭವಿಸಿದ ವಾಹನ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಮೃತಪಟ್ಟ ವ್ಯಕ್ತಿ ಮಂಗಳೂ ರಿನ ಫ್ಲಾಟ್ನಲ್ಲಿ ವಾಸಿಸುವ ಬಿಪಿನ್ (60) ಎಂಬವರೆಂದು ಗುರುತು ಹಚ್ಚಲಾಗಿದೆ. ಇವರು ಸಂಚರಿಸುತ್ತಿದ್ದ ಕಾರಿಗೆ ಟೆಂಪೋ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದಿಂದ ಗಂಭೀರ ಗಾಯ ಗೊಂಡ ಬಿಪಿನ್ರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಂತೆ ಸಾವು ಸಂಭವಿಸಿದೆ. ಬಿಪಿನ್ ಕುಂಬಳೆ ಭಾಗದಿಂದ ಮಂಗಳೂ ರಿನತ್ತ ತೆರಳುತ್ತಿದ್ದಾಗ ಎದುರು ಭಾಗದಿಂದ ಬಂದ ಟೆಂಪೋ ಢಿಕ್ಕಿ ಹೊಡೆದಿದೆ. ಮೃತದೇ ವನ್ನು ಮಂಗಳೂರು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.