ಅಗಲಿದ ವ್ಯಾಪಾರಿ ದಂಪತಿಗೆ ಕೆವಿವಿಇಎಸ್‌ನಿಂದ ಸಂತಾಪ
ಕಾಸರಗೋಡು: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಬಂದಡ್ಕ ಘಟಕದ ಅಧ್ಯಕ್ಷ, ರಾಜ್ಯ ಕೌನ್ಸಿಲರ್, ಕುತ್ತಿಕ್ಕೋಲು ವಲಯ ಕನ್ವೀನರ್ ಆಗಿದ್ದ ಕೆ. ಕೆ.ಕುಂಞಿಕೃಷ್ಣನ್ ಹಾಗೂ ಅವರ ಪತ್ನಿ ಚಿತ್ರಕಲಾ ಅವರ ಅಕಾಲಿಕ ನಿಧನಕ್ಕೆ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ಜಿಲ್ಲಾ ಸಮಿತಿ ಸಂತಾಪ ಸೂಚಿಸಿದೆ. ಸಭೆಯಲ್ಲಿ ಕೆವಿವಿಇಎಸ್ ರಾಜ್ಯ ಉಪಾಧ್ಯಕ್ಷರೂ, ಜಿಲ್ಲಾ ಅಧ್ಯಕ್ಷರಾದ ಕೆ. ಅಹಮ್ಮದ್ ಶರೀಫ್ ಮಾತನಾಡಿ ಕೆ.ಕೆ. ಕುಂಞಿಕೃಷ್ಣನ್ ಹಾಗೂ ಚಿತ್ರಕಲಾ ಅವರ ಅಕಾಲಿಕ ನಿಧನ ಸಂಘಟನೆಗೆ ತುಂಬಲಾರದ ನಷ್ಟವೆಂದು ತಿಳಿಸಿದರು. ಬಂದಡ್ಕ ಘಟಕವನ್ನು ಅಲ್ಪ ಸಮಯದಲ್ಲೇ ಜಿಲ್ಲೆಯಲ್ಲಿ ಗುರುತಿಸುವ ಘಟಕವಾಗಿ ಮಾರ್ಪಡಿಸಲು ಅವರಿಗೆ ಸಾಧ್ಯವಾಗಿತ್ತು ಎಂದೂ ಅವರು ಅಭಿಪ್ರಾಯಪಟ್ಟರು. ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಪಿ.ಪಿ. ಮುಸ್ತಫ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಜೆ. ಸಜಿ, ಕೋಶಾಧಿಕಾರಿ ಮಾಹಿನ್ ಕೋಳಿಕ್ಕರ, ಉಪಾಧ್ಯಕ್ಷರಾದ ಥೋಮಸ್ ಕಾನಾಟ್, ಶಿಹಾಬ್ ಉಸ್ಮಾನ್, ಎ.ವಿ. ಹರಿಹರಸುತನ್, ಸಿ.ಎಚ್. ಅಬ್ದುಲ್ ರಹೀಂ, ಗಣೇಶ್ ವತ್ಸ, ಕಾರ್ಯದರ್ಶಿಗಳಾದ ಕೆ.ವಿ. ಬಾಲಕೃಷ್ಣನ್, ಕೆ.ಎಂ. ಕೇಶವನ್ ನಂಬೀಶನ್, ಕುಂಞಿರಾಮನ್ ಆಕಾಶ್, ಅಬ್ದುಲ್ ಸಲೀಂ ಯು.ಎ, ಕೆ. ದಿನೇಶ್, ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಸಿ.ಎಚ್. ಶಂಸುದ್ದೀನ್ ಮೊದಲಾದವರು ಸಂತಾಪ ಸೂಚಿಸಿ ಮಾತನಾಡಿದರು.