ಟೌನ್ ಜಿ.ಯು.ಪಿ ಶಾಲೆ ಹಳೆ ವಿದ್ಯಾರ್ಥಿ ಸಂಗಮ
ಕಾಸರಗೋಡು: ನಗರದ ಟೌನ್ ಜಿಯುಪಿ ಶಾಲೆ ಇದರ 1986ರಿಂದ 93ರವರೆಗಿನ ಹಳೆ ವಿದ್ಯಾರ್ಥಿಗಳ 2ನೇ ಸಂಗಮ ಕಾರ್ಯಕ್ರಮ ಇತ್ತೀಚೆಗೆ ಕಾಸರಗೋಡು ರೋಟರಿ ಭವನದಲ್ಲಿ ನಡೆಯಿತು. ಶಿಕ್ಷಕರಾದ ಅಗ್ಗಿತ್ತಾಯ, ಪ್ರೇಮಾ, ಸೂರ್ಯ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಧನುಷ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿಜಿತ್ ಸ್ವಾಗತಿಸಿದರು. ದೇವದಾಸ್ ವಂದಿಸಿದರು. ವರ ಪ್ರಸಾದ್ ಕೋಟೆಕಣಿ ನಿರೂಪಿಸಿ ದರು. ಹಲವು ಮನರಂಜನಾ ಕಾರ್ಯಕ್ರಮ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.