ಮತ ಎಣಿಕೆಗಾಗಿ ನೇಮಕಗೊಂಡ ನೌಕರರಿಗೆ ಮೊದಲ ಹಂತದ ತರಬೇತಿ
ಕಾಸರಗೋಡು: ಲೋಕಸಭಾ ಚುನಾವಣೆ 2024ರ ಕಾಸರಗೋಡು ಮಂಡಲದ ಮತ ಎಣಿಕೆಗಾಗಿ ನೇಮಕಗೊಂಡ ನೌಕರರಿಗೆ ಮೊದಲ ಹಂತದ ತರಬೇತಿ ನೀಡಲಾಯಿತು. ಮಂಜೇಶ್ವರ, ಕಾಸರಗೋಡು, ಉದುಮ, ಕಾಞಂಗಾಡ್, ತೃಕ್ಕರಿಪುರ, ಪಯ್ಯನ್ನೂರು, ಕಲ್ಯಾಶ್ಶೇರಿ ಎಂಬಿ ೭ ವಿಧಾನ ಸಭಾಮಂಡಲಗಳ ಅಂಚೆ ಮತ ಅಸಿಸ್ಟೆಂಟ್ ರಿಟರ್ನಿಂಗ್ ಆಫೀಸರ್‌ಗಳು, ಇಲೆಕ್ಟ್ರೋನಿಕ್ ವೋಟಿಂಗ್ ಮೆಶಿನ್, ಕೌಟಿಂಗ್ ಸುಪರ್‌ವೈಸರ್‌ಗಳು, ಕೌಂಟಿಂಗ್ ಏಜೆಂಟರ್‌ಗಳು, ಮೈಕ್ರೋ ಒಬ್ಸರ್‌ವರ್‌ಗಳು ಎಂಬಿವರಿಗೆ ತರಬೇತಿ ನೀಡಲಾಗಿದೆ. ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ೬ ತರಗತಿ ಕೊಠಡಿಗಳಲ್ಲಾಗಿ ನಡೆದ ತರಬೇತಿಗೆ ರಾಜ್ಯ, ಜಿಲ್ಲಾಮಟ್ಟದ ಮಾಸ್ಟರ್ ಟ್ರೈನರ್‌ಗಳು ನೇತೃತ್ವ ನೀಡಿದರು. ಮೇ ೨೯ರಂದು ದ್ವಿತೀಯ ಹಂತದ ತರಬೇತಿ ನೀಡಲಾಗುವುದು. ಟ್ರೈನಿಂಗ್ ಅಸಿಸ್ಟೆಂಟ್ ನೋಡಲ್ ಆಫೀಸರ್ ಕೆ. ಬಾಲಕೃಷ್ಣನ್, ಸಜಿತ್ ಕುಮಾರ್, ಬಿ.ಎನ್. ಸುರೇಶ್, ಟಿ.ವಿ. ಸಜಿತ್, ಜಿ.ಕೆ. ಸುರೇಶ್‌ಬಾಬು, ಸುಬೈರ್, ಗೋಪಾಲಕೃಷ್ಣನ್ ಭಾಗವಹಿಸಿದರು.