ಕುಂಬಳೆ- ಕೊಯಿಪ್ಪಾಡಿ ಮೂಜಿಮುಡಿ ತೋಡು ಸಂರಕ್ಷಣೆಗೆ ಗೋಡೆ ನಿರ್ಮಿಸಲು ಆಗ್ರಹ

ಕುಂಬಳೆ: ಲಕ್ಷಾಂತರ ರೂ. ವೆಚ್ಚ ಮಾಡಿ ಕುಂಬಳೆ ಪಂಚಾ ಯತ್ ನವೀಕರಿಸಿದ ಕುಂಬಳೆ ಕೊಯಿಪ್ಪಾಡಿ ಮೂಜಿಮುಡಿ ತೋಡಿಗೆ ಸಂರಕ್ಷಣಾ ಗೋಡೆ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಕುಂಬಳೆ ಹೊಳೆಯನ್ನು ಸಂಗಮಿಸುವ ಮೂಜಿಮುಡಿ ತೋ ಡು ಪ್ರಕೃತಿ ರಮಣೀಯವಾಗಿದೆ.

ಕಡು ಬೇಸಿಗೆಯಲ್ಲೂ ಬತ್ತದ ನೀರಿನ ಒರತೆ ಇದರಲ್ಲಿದ್ದು, ಕುಂ ಬಳೆಯ ಪ್ರಧಾನ ಜಲಮೂಲಗಳಲ್ಲಿ ಇದೂ ಒಂದಾಗಿದೆ. ಹಲವಾರು ವರ್ಷಗಳಿಂದ ಕಾಡು ಪೊದೆ ಆವರಿಸಿ ಪ್ಲಾಸ್ಟಿಕ್ ತ್ಯಾಜ್ಯಗಳು ಸಂಗ್ರಹಗೊಂಡು ಈ ತೋಡು ನಾಶದ ಹಂತದಲ್ಲಿತ್ತು. ಈ ವರ್ಷ ಪಂಚಾಯತ್ ವತಿಯಿಂದ ಇದಕ್ಕೆ ಹೊಸ ಜೀವ ನೀಡಲಾಗಿದೆ. ಪಂಚಾಯತ್‌ನ ೨೦೨೨-೨೩ನೇ ವಾರ್ಷಿಕ ಯೋಜನೆಯಲ್ಲಿ ೮ ಲಕ್ಷ ರೂ. ವೆಚ್ಚ ಮಾಡಿ ಈ ತೋಡನ್ನು ಶುಚೀಕರಿಸಲಾಗಿದೆ. ಕೊಯಿಪ್ಪಾಡಿ ಕೊಪ್ಪಳಂ ತೀರದೇಶ ರಸ್ತೆಯ ಸಮೀಪ ದಲ್ಲೇ ಹರಿಯುವ ೮೦೦ ಮೀಟರ್ ಉದ್ದದ ಮೂಜಿಮುಡಿ ತೋಡನ್ನು ಜಲಮೂಲ ಸಂರಕ್ಷಣಾ ಯೋಜನೆಯಲ್ಲಿ ಸೇರಿಸಿ ಶುಚೀಕರಿಸಲಾಗಿದೆ. ಆದರೆ ಕಳೆದ ಹಲವು ದಿನಗಳಿಂದ ಸುರಿದ ಮಳೆಗೆ  ಶುಚೀಕರಣದ ವೇಳೆ ತೋಡಿನ ಸಮೀಪದಲ್ಲೇ ಹಾಕಿದ್ದ ಮಣ್ಣು, ತ್ಯಾಜ್ಯಗಳು ತೋಡಿಗೆ ಬೀಳುವ ಸನ್ನಿವೇಶ ಇದೆ ಎಂದು ಸ್ಥಳೀಯರು ತಿಳಿಸುತ್ತಾರೆ. ಮಳೆ ತೀವ್ರಗೊಂಡರೆ ಮತ್ತೆ ತೋಡು ಹಳೆಯ ಸ್ಥಿತಿಗೆ ತಲುಪುವ ಆತಂಕವಿದೆ. ಆದು ದರಿಂದ ತೋಡಿನ ಬದಿಯಲ್ಲಿ ಗೋಡೆ ನಿರ್ಮಿಸಿ ತೋಡನ್ನು ಸಂರಕ್ಷಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದಕ್ಕಾಗಿ ಕೇಂದ್ರ ಹಾರ್ಬರ್ ನಿಧಿ, ರಾಜ್ಯ ಜಲ ಸಂಪನ್ಮೂಲ ಇಲಾಖೆ ನಿಧಿಯನ್ನು ಲಭ್ಯಗೊಳಿಸಿ ಸಂರಕ್ಷಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಡ್ರೈ ಡೇ ಹಿಂತೆಗೆತ ಇಲ್ಲ

ತಿರುವನಂತಪುರ: ರಾಜ್ಯದಲ್ಲಿ ಪ್ರತೀ ತಿಂಗಳ ೧ನೇ ತಾರೀಖಿನಂದು ಮದ್ಯ ದಂಗಡಿ ಮತ್ತು ಬಾರ್‌ಗಳನ್ನು ಮುಚ್ಚಿ ಡ್ರೈ ಡೇ ಆಚರಿಸುವ ತೀರ್ಮಾನವನ್ನು  ಸರಕಾರ ಹಿಂತೆಗೆದುಕೊಂಡಿಲ್ಲವೆಂದು ರಾಜ್ಯ ಸರಕಾರದ ಮುಖ್ಯ ಕಾರ್ಯ ದರ್ಶಿ ಡಾ. ವಿ. ವೇಣು ತಿಳಿಸಿದ್ದಾರೆ. ಡ್ರೈಡೇಯನ್ನು ಹಿಂತೆಗೆದುಕೊಳ್ಳ ಲಾಗುವುದೆಂಬ ಪ್ರಚಾರ ಸರಿಯಲ್ಲ ವೆಂದು ಅವರು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page