ರಾಜ್ಯ ಅಧ್ಯಾಪಕ ಪುರಸ್ಕಾರ ಪುರಸ್ಕೃತ ಅಧ್ಯಾಪಕ ನಿಧನ
ಕಾಸರಗೋಡು: ರಾಜ್ಯ ಅಧ್ಯಾಪಕ ಪುರಸ್ಕಾರ ಪುರಸ್ಕೃತರೂ, ಪೆರಿಯ ಸರಕಾರಿ ಪ್ರೌಢಶಾಲೆಯಲ್ಲಿ ದೀರ್ಘಕಾಲ ಮುಖ್ಯೋಪಾಧ್ಯಾಯ ರಾಗಿ ಸೇವೆ ಸಲ್ಲಿಸಿದ್ದ ಪೆರಿಯ ವೇಙಯಿಲ್ ನಿವಾಸಿ ಪಿ. ಕುಂಞಂಬು ನಾಯರ್ (90) ನಿಧನ ಹೊಂದಿದರು. ಜಿಲ್ಲೆಯ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ರಂಗಗಳಲ್ಲಿ ಸಕ್ರಿಯರಾಗಿದ್ದರು. ಅಧ್ಯಾಪಕ ಸಂಘಟನೆಯಾದ ಜಿಎಸ್‌ಟಿಯುನ ಜಿಲ್ಲಾಧ್ಯಕ್ಷರಾಗಿ ಯೂ ಕರ್ತವ್ಯ ನಿರ್ವಹಿಸಿದ್ದಾರೆ.
ಪೆರಿಯ ತರವಾಡು ಸಮಿತಿ ಅಧ್ಯಕ್ಷ, ಕೂಡಾನಂ ಮಣಿಯಂತಟ್ಟ ಶ್ರೀ ಮಹಾವಿಷ್ಣು ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಪೆರಿಯ ಎನ್‌ಎಸ್‌ಎಸ್ ಕರಯೋಗಂ ಅಧ್ಯಕ್ಷ, ಕಾಞಂಗಾಡ್ ಚಿನ್ಮಯ ವಿದ್ಯಾಲಯದ ಮಾಜಿ ಪ್ರಾಂಶುಪಾಲ ರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಮೃತರು ಪತ್ನಿ ಮಾವಿಲ ಶಾಂತಕುಮಾರಿ (ಮಾಣಿಮೂಲೆ), ಮಕ್ಕಳಾದ ಎಂ. ಜಯಶ್ರೀ, ಎಂ. ಜಯರಾಜನ್ ನಂಬ್ಯಾರ್, ಎಂ. ಜಯಚಂದ್ರನ್ ನಂಬ್ಯಾರ್, ಎಂ. ಜಯಲತ, ಅಳಿಯ- ಸೊಸೆಯಂದಿ ರಾದ ಕೋಡೋತ್ ಶಿವಶಂಕರನ್, ಡಾ. ಬಿಂದು ಜಯರಾಜನ್, ಪಿ.ಎಂ. ಸೇತು ಲಕ್ಷ್ಮಿ, ಎಂ. ರಾಜ್ ಮೋಹನ್ ಸಹೋದರ- ಸಹೋದರಿಯರಾದ ಡಾ. ಪಿ.ವಿ. ಕೃಷ್ಣನ್ ನಾಯರ್, ಪಿ.ವಿ. ಕೆ. ನಾಯರ್, ಡಾ. ಪಿ.ವಿ. ಗೋವಿಂದನ್ ನಾಯರ್, ಡಾ. ಪಿ.ವಿ. ಮಾಧವನ್ ನಾಯರ್, ನ್ಯಾಯವಾದಿ ಪಿ.ವಿ.ಸಿ. ನಾಯರ್, ಪಿ.ವಿ. ರವೀಂದ್ರನ್ ನಾಯರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.