ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಕುಂಬಳೆ: ಅನಧಿಕೃತವಾಗಿ ಕರ್ನಾಟಕ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಕಡಂಬಾರು ವಿಲ್ಲೇಜ್‌ನ ಕುಳಬಯಲು ನಿವಾಸಿ ಜೋನ್ ಡಿಸೋಜಾ (46)ಎಂಬಾತ ಬಂಧಿತ ವ್ಯಕ್ತಿಯೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ಸಂಜೆ ೫.೧೫ರ ವೇಳೆ ಮೀಂಜ ವಿಲ್ಲೇಜ್‌ನ ಚಿಗುರುಪಾದೆ ಯಿಂದ ಈತನನ್ನು ಬಂಧಿಸಲಾಗಿದೆ. ಈತನ ಕೈಯಿಂದ 7.020 ಲೀಟರ್ ಕರ್ನಾಟಕ ಮದ್ಯ ವಶಪಡಿಸಲಾಗಿದೆ. ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಕುಂಬಳೆ ರೇಂಜ್ ಪ್ರಿವೆಂಟಿವ್ ಆಫೀಸರ್ ಗಳಾದ ಮನಾಸ್ ಕೆ.ವಿ, ಮೊಯ್ದೀನ್ ಸಾದಿಕ್ ಟಿ.ಎಂ., ರಮೇಶನ್ ಆರ್, ಸಿವಿಲ್ ಎಕ್ಸೈಸ್ ಆಫೀಸರ್ ಅಖಿಲೇಶ್ ಎಂ.ಎಂ, ಚಾಲಕ ಪ್ರವೀಣ್ ಎಂಬವರಿದ್ದರು.

You cannot copy contents of this page