ಆಟೋ ರಿಕ್ಷಾಕ್ಕೆ ಕಾರು ಢಿಕ್ಕಿ: ಆಟೋ ರಿಕ್ಷಾ ಚಾಲಕನಿಗೆ ಗಂಭೀರ

ಬದಿಯಡ್ಕ: ಆಟೋ ರಿಕ್ಷಾಕ್ಕೆ ಕಾರು  ಢಿಕ್ಕಿ ಹೊಡೆದು ಆಟೋ ರಿಕ್ಷಾ ಚಾಲಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ನಾರಂಪಾಡಿ ಪಳ್ಳ ನಿವಾಸಿ ಅನೀಶ್ (22) ಎಂಬವರು ಗಾಯಗೊಂಡಿದ್ದು, ಇವರನ್ನು ಚೆಂಗಳದ ಖಾಸಗಿ ಆಸ್ಪತ್ರೆಯಲ್ಲಿ  ದಾಖಲಿಸಲಾಗಿದೆ. ನಿನ್ನೆ ರಾತ್ರಿ 7.30ರ ವೇಳೆ ನಾರಂಪಾಡಿ ಬಳಿಯ ನೆಲ್ಯಡ್ಕ ಎಂಬಲ್ಲಿ ಅಪಘಾತ ಸಂಭವಿಸಿದೆ. ಕರುವಲ್ತಡ್ಕ ಭಾಗದಿಂದ ಬಂದ ಕಾರು ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆಯೆಂದು ಹೇಳಲಾಗುತ್ತಿದೆ.

You cannot copy contents of this page