ಬದಿಯಡ್ಕ: ಕರಿಂಬಿಲ ನಿವಾಸಿ ಕೇಶವ ಪ್ರಭು (90) ನಿನ್ನೆ ನಿಧನ ಹೊಂದಿದರು. ಅಸೌಖ್ಯನಿಮಿತ್ತ ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕೇರಳ ರಾಜ್ಯ ಮಲೇರಿಯ ನಿಯಂತ್ರಣ ಮಂಡಳಿ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ಇವರು ನಿವೃತ್ತರಾಗಿದ್ದರು. ಮೃತರು ಪುತ್ರ ಅನಿಲ್ ಕುಮಾರ್ ಪ್ರಭು, ಸೊಸೆ ಸುಮನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಕೇಶವಪ್ರಭು ಅವರ ಪತ್ನಿ ಶ್ರೀಮತಿ ಹಾಗೂ ಇನ್ನೋರ್ವ ಪುತ್ರ ಚಂದ್ರಶೇಖರ ಪ್ರಭು ಈ ಹಿಂದೆ ನಿಧನರಾಗಿದ್ದಾರೆ.






