ಬೈಕ್ ಢಿಕ್ಕಿ ಹೊಡೆದು ಕಾಂಗ್ರೆಸ್ ನೇತಾರ ಮೃತ್ಯು

ಕಾಸರಗೋಡು: ಬೈಕ್ ಢಿಕ್ಕಿ ಹೊಡೆದು ಕಾಂಗ್ರೆಸ್ ನೇತಾರ ಸಾವನ್ನಪ್ಪಿದ ಘಟನೆ ನಡೆದಿದೆ. ಕಾಂಗ್ರೆಸ್‌ನ ಪಳ್ಳಿಕೆರೆ ಮಂಡಲ ಸಮಿತಿ ಕಾರ್ಯದರ್ಶಿ ಪಳ್ಳಿಕ್ಕೆರೆ ತಚ್ಚಂಗಾಡ್ ನಿವಾಸಿ ಕೆ. ಧನಂಜಯನ್ ಕರುವಾ ಕೋಡ್ (64) ಸಾವನ್ನಪ್ಪಿದ ದುರ್ದೈವಿ.

ಇವರು ಸೂಪರ್ ಮಾರ್ಕೆಟ್‌ನಿಂದ ಸಾಮಗ್ರಿಗಳನ್ನು ಖರೀದಿಸಿ ನಿನ್ನೆ ಸಂಜೆ ತಚ್ಚಂಗಾಡ್ ಸರಕಾರಿ ಹೈಸ್ಕೂಲ್‌ನ ಎದುರುಗಡೆಯ ರಸ್ತೆಯನ್ನು ದಾಟುತ್ತಿದ್ದ ವೇಳೆ ಬೈಕ್ ಢಿಕ್ಕಿಹೊಡೆದಿದೆ. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಧನಂಜಯನ್ ತಚ್ಚಂಗಾಡ್ ಶಾಲೆಯ ಬಳಿ ಕ್ಯಾಂಟೀನ್ ನಡೆಸಿ ಉಪ ಜೀವನ ಮಾರ್ಗ ನಡೆಸುತ್ತಿದ್ದರು. ದಿವಂಗತರಾದ ಕೋರನ್ ಮಣಿಯಾಣಿ- ತಂಬಾಯಿ ಅಮ್ಮ ದಂಪತಿ ಪುತ್ರನಾಗಿರುವ ಮೃತರು ಪತ್ನಿ ಟ್ರಸೀನಾ ಕರುವಾಕ್ಕೋಡ್ (ಮಹಿಳಾ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ), ಮಕ್ಕಳಾದ ಆದಿಲ್, ಬಿನ್ಹಾ, ಸಹೋದರ ಸಹೋದರಿಯರಾದ ಶಾರದ, ನಾರಾಯಣಿ, ಉಷ, ಗಣೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page