ಕುಂಬಳೆಯಲ್ಲಿ ಡಾ. ಶ್ಯಾಮ್‌ಪ್ರಸಾದ್ ಮುಖರ್ಜಿ ಬಲಿದಾನ ದಿನಾಚರಣೆ
ಕುಂಬಳೆ: ಜನಸಂಘದ ಸಂಸ್ಥಾಪಕ ಡಾ. ಶ್ಯಾಮ್‌ಪ್ರಸಾದ್ ಮುಖರ್ಜಿ ಯವರ ಬಲಿದಾನ ದಿನವನ್ನು ಕುಂಬಳೆ ಬಿಜೆಪಿ ಮಂಡಲ ಸಮಿತಿ ವತಿಯಿಂದ ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು. ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯ ವಿ. ರವೀಂದ್ರನ್ ಉದ್ಘಾಟಿಸಿದರು.
ಮಂಡಲ ಸಮಿತಿ ಅಧ್ಯಕ್ಷ ಸುನಿಲ್ ಅನಂತಪುರ ಅಧ್ಯಕ್ಷತೆ ವಹಿಸಿದರು. ರಾಜ್ಯ ಉತ್ತರ ವಲಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಶೆಟ್ಟಿ, ಜಿಲ್ಲಾ ಸಮಿತಿ ಸದಸ್ಯ ಮುರಳೀಧರ ಯಾದವ್, ಮಂಡಲ ಕಾರ್ಯದರ್ಶಿ ಕೆ. ಸುಧಾಕರ ಕಾಮತ್, ಸ್ವಾಗತ್ ಸೀತಾಂಗೋಳಿ, ಧನ್‌ರಾಜ್ ಪ್ರತಾಪ್‌ನಗರ, ಕುಂಬಳೆ ಉತ್ತರ ವಲಯ ಅಧ್ಯಕ್ಷ ಪ್ರದೀಪ್ ಆರಿಕ್ಕಾಡಿ, ಒಬಿಸಿ ಮೋರ್ಚಾ ಮಂಡಲ ಅಧ್ಯಕ್ಷ ಮಹೇಶ್ ಪುಣಿಯೂರ್, ಜನಪ್ರತಿನಿಧಿಗಳಾದ ವಿವೇಕಾನಂದ ಶೆಟ್ಟಿ, ಜನಾರ್ದನ ಕಣ್ಣೂರು, ವಿದ್ಯಾ ಎನ್. ಪೈ, ಗೋಪಾಲ ಕಂಚಿಕಟ್ಟೆ, ಶಶಿ ಕುಂಬಳೆ, ಜಗದೀಶ್ ಪೇರಾಳ ಉಪಸ್ಥಿತರಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಮಯ್ಯ ಸ್ವಾಗತಿಸಿ, ಅನಿಲ್ ಕುಮಾರ್ ವಂದಿಸಿದರು.