ಆಟೋಚಾಲಕ ಕುಸಿದು ಬಿದ್ದು ಮೃತ್ಯು
ಹೊಸದುರ್ಗ: ಆಟೋಚಾಲಕ ರೊಬ್ಬರು ಕುಸಿದು ಬಿದ್ದು ಮೃತಪಟ್ಟರು. ಚೆಮ್ಮಟ್ಟವಯಲ್ ಅಡಂಬ್ ಎಂಬಲ್ಲಿನ ಮೋಹನನ್ ಯಾನೆ ನಿಟ್ಟೂರ್ ಪ್ರಕಾಶನ್ (50) ಮೃತಪಟ್ಟ ವ್ಯಕ್ತಿ. ಇವರು ಕಾಞಂಗಾಡ್‌ನಲ್ಲಿ ಆಟೋಚಾಲಕ ರಾಗಿದ್ದರು. ನಿನ್ನೆ ಸಂಜೆ ಕಾಞಂಗಾಡ್‌ನಲ್ಲಿ ಹೃದಯಾಘಾತ ವುಂಟಾಗಿ ಕುಸಿದು ಬಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ದಿ| ಪಾರಕಂಡತ್ತಿಲ್ ತಂಬಾನ್ ಪೊದುವಾಳ್ ಹಾಗೂ ನಿಟ್ಟೂರು ಕುಂಞಿಪೆಣ್ಣ್ ಅಮ್ಮ ಅವರ ಪುತ್ರನಾದ ಮೃತರು ಪತ್ನಿ ಸತೀದೇವಿ, ಮಕ್ಕಳಾದ ಮಂಜಿಮ ಮೋಹನ್, ದೇವಾಂಜನನ್, ಸಹೋದರ- ಸಹೋದರಿಯರಾದ ಗಂಗಾಧರನ್, ದಾಕ್ಷಾಯಿಣಿ, ಶೋಭ, ಮುರಳಿ, ಶ್ರೀಜ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.