ಪುತ್ತಿಗೆಯಲ್ಲಿ ಕ್ಲಬ್ ವತಿಯಿಂದ ಬಿತ್ತನೆ ಉತ್ಸವ
ಪುತ್ತಿಗೆ: ಪುತ್ತಿಗೆ ಎಸ್‌ಕೆಎಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಇದರ ವತಿಯಿಂದ ಬಿತ್ತನೆ ಉತ್ಸವ ಜರಗಿತು. ಪುತ್ತಿಗೆ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಪಾಲಾಕ್ಷ ರೈ ಉದ್ಘಾಟಿಸಿದರು. ಪುತ್ತಿಗೆ ಭತ್ತೋತ್ಪಾದಕ ಸಮಿತಿ ಅಧ್ಯಕ್ಷ ಅಬ್ದುಲ್ಲ ಕಂಡತ್ತಿಲ್ ಅಧ್ಯಕ್ಷತೆ ವಹಿಸಿದ್ದರು. ಪುತ್ತಿಗೆ ಕೃಷಿ ಭವನದ ಅಧಿಕಾರಿ ದಿನೇಶ್ ಬಿತ್ತನೆ ಬೀಜ ವಿತರಿಸಿ, ಪುತ್ತಿಗೆ ಏಜೆಬಿಎಸ್ ಶಾಲಾ ಮಕ್ಕಳಿಗೆ ಭತ್ತ ಕೃಷಿ ಬಗ್ಗೆ ವಿವರಿಸಿದರು. ಸಂಘದ ಹಿರಿಯ ಸದಸ್ಯ ಎಂ. ಬಾಬು ಬಂಗೇರ, ವೈ. ಗಿರೀಶ್ ಭಟ್ ಅಡ್ಕತ್ತೊಟ್ಟಿ ಶುಭಾಶಂಸನೆಗೈದರು. ಅಧ್ಯಕ್ಷ ಜಿತೇಂದ್ರ ಆಚಾರ್ಯ ಸ್ವಾಗತಿಸಿ, ಜೊತೆ ಕಾರ್ಯರ್ಶಿ ಪ್ರಜಿತ್ ವಿ. ರೈ ವಂದಿಸಿದರು.