ಮೊಗ್ರಾಲ್ ನಾಂಗಿಯಲ್ಲಿ ತೀವ್ರಗೊಂಡ ಕಡಲ್ಕೊರೆತ: ಬೀಚ್ ವ್ಯೂ ರೆಸೋರ್ಟ್ ಸಮುದ್ರಪಾಲಾಗುವ ಭೀತಿ

ಮೊಗ್ರಾಲ್: ಸಮುದ್ರತೀರ ವಲಯದಲ್ಲಿ ಕಡಲ್ಕೊರೆತಕ್ಕೆ ಯಾವುದೇ ಶಮನ ಕಂಡುಬರುವುದಿಲ್ಲ. ಪೆರುವಾಡ್ ಕಡಪ್ಪುರದ ಬೆನ್ನಲ್ಲೇ ಮೊಗ್ರಾಲ್ ನಾಂಗಿ ಕಡಪ್ಪುರದಲ್ಲೂ ಕಡಲ್ಕೊರೆತ ತೀವ್ರಗೊಂಡಿದೆ. ಎರಡು ವರ್ಷದ ಹಿಂದೆ ನಿರ್ಮಿಸಿದ ಬೀಚ್ ವ್ಯೂ ರೆಸೋರ್ಟ್ ಸಮುದ್ರಪಾಲಾಗುವ ಸ್ಥಿತಿಯಲ್ಲಿದೆ. ರೆಸೋರ್ಟ್‌ನ ಆವರಣಗೋಡೆ ಹಾಗೂ  ಒಂದು ಭಾಗ ಈಗಾಗಲೇ ನೀರುಪಾಲಾಗಿದೆ. ಪೇರಾಲ್ ಕಣ್ಣೂರು ಅಬ್ದುಲ್ಲ ಮಾಸ್ತರ್‌ರ ಪುತ್ರ ಮೊಹಮ್ಮದ್ ಇರ್ಷಾದ್‌ರ ಮಾಲಕತ್ವದಲ್ಲಿರುವ ರೆಸೋರ್ಟ್ ಆಗಿದೆ ಇದು. ವರ್ಷಗಳ ಹಿಂದೆ ಈ ಸ್ಥಳದಲ್ಲಿ ತೀವ್ರಗೊಂಡ ಕಡಲ್ಕೊರೆತದಿಂದಾಗಿ ಮೊಹಮ್ಮದ್, ಖಾಲಿದ್ ಎಂಬವರ ಮನೆ ಸಂಪೂರ್ಣವಾಗಿ ಸಮುದ್ರಪಾಲಾಗಿತ್ತು. ಇದರ ಬಳಿಯಲ್ಲೇ ಹೊಸತಾಗಿ ಬೀಚ್ ರೆಸೋರ್ಟ್ ನಿರ್ಮಿಸಲಾಗಿದೆ. ಕಳೆದ ವರ್ಷ ನಾಂಗಿಯಲ್ಲಿ ಈಮ್ಯಾನ್ ಎಂಬ ರೆಸೋರ್ಟ್‌ನ ಆವರಣಗೋಡೆ, ಕಟ್ಟಡದ ಒಂದು ಭಾಗ ಸಮುದ್ರಪಾಲಾಗಿತ್ತು.

RELATED NEWS

You cannot copy contents of this page