ಗಾಂಜಾ ಬೀಡಿ ಸೇದುತ್ತಿದ್ದ ಓರ್ವನ ಬಂಧನ

ಬದಿಯಡ್ಕ: ಬದಿಯಡ್ಕ ಬಸ್ ನಿಲ್ದಾಣ ಬಳಿ ನಿನ್ನೆ ಸಂಜೆ ಗಾಂಜಾ ಬೀಡಿ ಸೇದುತ್ತಿದ್ದ ನೀರ್ಚಾಲು ಬಳಿಯ ಮೆಣಸಿನ ಪಾರೆ ನಿವಾಸಿ ರಫೀಕ್ (21) ಎಂಬಾತನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಈತ ನೀರ್ಚಾಲು ಭಾಗದಲ್ಲಿ ಯುವಕರಿಗೆ ಹಾಗೂ ಅನ್ಯರಾಜ್ಯ ಕಾರ್ಮಿಕರಿಗೆ ಗಾಂಜಾ ತಲುಪಿಸುವ ತಂಡದ ಕೊಂಡಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ತಿಂಗಳ ಹಿಂದೆ ಸೀತಾಂಗೋಳಿಯಲ್ಲಿ ಈತ ಸ್ಕೂಟರ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ವೇಳೆ ಕಾಸರಗೋ ಡು ಸರ್ಕಲ್ ಅಬಕಾರಿ ದಳ ಈತನನ್ನು ಬಂಧಿಸಿತ್ತೆಂದೂ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page