ಮುಸ್ಲಿಂಲೀಗ್ ನೇತಾರ ನಿಧನ
ಉಪ್ಪಳ: ಮುಸ್ಲಿಂ ಲೀಗ್ ನೇತಾರ ಕೈಕಂಬ ನಿವಾಸಿ ಕೆ. ಇಬ್ರಾಹಿಂ ಹಾಜಿ (71) ನಿಧನರಾಗಿದ್ದಾರೆ. ಶನಿವಾರ ಬೆಳಿಗ್ಗೆ ಮನೆಯಲ್ಲಿ ಹೃದಯಘಾತ ಉಂಟಾಗಿದೆ. ಇವರು ಈ ಹಿಂದೆ ಗಲ್ಫ್ನಲ್ಲಿ ಹೋಟೆಲ್ ವ್ಯಾಪಾರಿ ಯಾಗಿದ್ದರು. ಮುಸ್ಲಿಂಲೀಗ್ ಮಂಗಲ್ಪಾಡಿ ಪಂಚಾಯತ್ ಕಮಿಟಿಯ ಮಾಜಿ ಅಧ್ಯಕ್ಷ, ಕಾರ್ಯದರ್ಶಿಯಾ ಗಿದ್ದರು. ಉಪ್ಪಳ ಗೇಟ್ ಕುನ್ನಿಲ್ ಜುಮಾ ಮಸೀದಿಯ ಕಾರ್ಯದರ್ಶಿ ಯಾಗಿದ್ದರು. ಮೃತರ ಪತ್ನಿ ಆಸಿಯಮ್ಮ, ಮಕ್ಕಳಾದ ಲತೀಫ್, ಸಾಧಿಕ್, ಮಿರ್ಸಾನ, ಅಳಿಯ ಅಶ್ರಫ್, ಸೊಸೆ ಯಂದಿರಾದ ಸುಮಯ್ಯ, ರುಕ್ಸಾನ, ಸಹೋದರ ಸಹೋದರಿಯರಾದ ಅಬ್ದುಲ್ಲ, ಯೂಸಫ್, ಮರಿಯಮ್ಮ, ಅಬೂಬಕ್ಕರ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.