ಮನೆಗೆ ಮರ ಬಿದ್ದು ಹಾನಿ: ವಿದ್ಯುತ್ ತಂತಿ ತುಂಡಾಗಿ ರಸ್ತೆಗೆ

ಉಪ್ಪಳ: ಮನೆಗೆ ಮರ ಬಿದ್ದು, ಮನೆ ಆಂಶಿಕವಾಗಿ ಹಾನಿಯಾದ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಸೋಂಕಾಲು ಕೊಡಂಗೆ ನಿವಾಸಿ ಅಬ್ಬು ಎಂಬವರ ಮನೆಯ ಹಿಂಭಾಗಕ್ಕೆ ಪರಿಸರದ ಉಪ್ಪಳಿಗೆ ಮರವೊಂದು ಬಿದ್ದಿದೆ. ಇದರಿಂದಾಗಿ ಅಡುಗೆ ಕೋಣೆಗೆ ಹಾಕಲಾಗಿದ್ದ ಸಿಮೆಂಟ್ ಶೀಟ್ ಹಾನಿಗೊಂಡಿದೆ. ಮರವು ವಿದ್ಯುತ್ ತಂತಿಗೆ ಬಿದ್ದು ತಂತಿ ತುಂಡಾಗಿ ನೆಲಕ್ಕೆ ಬಿದ್ದಿದ್ದು ಕಂಬವೊಂದು ವಾಲಿ ನಿಂತಿದೆ. ವಿದ್ಯುತ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತಲುಪಿ ವಿದ್ಯುತ್ ವಿಚ್ಛೇಧಿಸಿದ್ದಾರೆ. ಅಲ್ಪ ಹೊತ್ತು ಈ ಪರಿಸರದಲ್ಲಿ ವಿದ್ಯುತ್ ಮೊಟಕುಗೊಂಡಿತ್ತು.

RELATED NEWS

You cannot copy contents of this page