ಮೂಸೋಡಿಯಲ್ಲಿ ಒಂದು ಮನೆ ಸಹಿತ ಹಲವು ತೆಂಗಿನ ಮರಗಳು ಸಮುದ್ರಪಾಲು: ಐದು ಕುಟುಂಬಗಳ ಸ್ಥಳಾಂತರ
ಉಪ್ಪಳ: ಮೂಸೋಡಿಯಲ್ಲಿ ಕಡಲ್ಕೊರೆತ ವ್ಯಾಪಕಗೊಂಡಿದ್ದು, ಕರಾವಳಿ ಪ್ರದೇಶದ ನಿವಾಸಿಗಳು ಆತಂಕಗೊAಡ್ತಿದ್ದಾರೆ. ಮಂಗಲ್ಪಾಡಿ ಪಂಚಾಯತ್‌ನ 1ನೇ ವಾರ್ಡ್ ಮೂಸೋಡಿಯಲ್ಲಿ ಕೂಲಿ ಕಾರ್ಮಿಕ ಮೂಸಾ ಎಂಬವರ ಮನೆ ಸಮುದ್ರ ಪಾಲಾಗಿರುವಂತೆ ಇದೇ ಪರಿಸರದ ಆಸಿಯಮ್ಮ, ತಾಹಿರ, ಅಲಿಕುಂಞÂ, ಮೊಹಮ್ಮದ್, ಇಸ್ಮಾಯಿಲ್ ಎಂ ಬವರ ಮನೆಗಳೂ ಅಪಾಯದ ಅಂ ಚಿನಲ್ಲಿದೆ. ಕಡಲ್ಕೊರೆತ ಮುಂದುವರಿ ಯುತ್ತಿದ್ದು, ಈಗಾಗಲÉÃ ಹಲವಾರು ಫಲ ಕೊಡುವ ತೆಂಗಿನ ಮರಗಳು ನಾಶಗೊಂಡಿದೆ. ಇತ್ತೀಚೆಗೆ ಸ್ಥಳಕ್ಕೆ ತಲುಪಿ ಪರಿಶೀಲಿಸಿದ ವಿಲೇಜ್, ಫಿಶರೀಸ್ ಇಲಾಖೆ ಅಧಿಕಾರಿಗಳು ಅಪಾಯದಂಚಿನಲ್ಲಿರುವ ಕುಟುಂಬಕ್ಕೆ ಸ್ಥಳಾಂತರಗೊಳ್ಳಲು ನೋಟೀಸು ನೀಡಿದ್ದರು. ಇದರಂತೆ ಇವರು ಸಂ ಬಂಧಿಕರ ವನೆಯಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿನ ಕೈರುನ್ನೀಸ, ಸೆಫಿಯ, ನೆಫೀಸ, ಕಮಲ, ಜಾನು ಎಂಬವರ ಭೂಮಿ, ತೆಂಗಿನ ಮರಗಳು ಸಮುದ್ರ ಪಾಲಾಗಿ ರುವುದಾಗಿ ತಿಳಿಸಿದ್ದಾರೆ. ಹಲವು ವರ್ಷಗಳಿಂದ ಕಡಲ್ಕೊರೆತದಿಂದ ಉಪ್ಪಳ ಪರಿಸರ ಪ್ರಡೇಶದಲ್ಲಿ ಹಲವು ಮನೆಗಳು ನೀರು ಪಾಲಾಗುತ್ತಿದೆ. ಬೆಸ್ತರ ಸಹಿತ ನೂರಾರು ಕುಟುಂಬಗಳು ಆತಂಕಗೊAಡಿವೆ. ಶಾರದಾನಗರ, ಮಣಿಮುಂಡ, ಹನುಮಾನ್ ನಗರ, ಶಿವಾಜಿನಗರ ಸಹಿತ ಪರಿಸರದಲ್ಲಿ ಅಲೆಗಳ ಭೀತಿ ಉಂಟಾಗಿದ್ದು, ಆತಂಕದಿAದಲೇ ಜೀವನ ಸಾಗಿ ಸುತ್ತಿದ್ದಾರೆ. ಸಮುದ್ರ ತೀರದ ಉದ್ದಕ್ಕೂ ವ್ಯವಸ್ಥಿತವಾದ ತಡೆಗೋಡೆ ನಿರ್ಮಿಸಲು ಒತ್ತಾಯಿಸಿದ್ದಾರೆ.