ಮೊಗ್ರಾಲ್ ಸರ್ವೀಸ್ ರಸ್ತೆಯಲ್ಲಿ ಕೆಟ್ಟು ನಿಂತ ಪಿಕಪ್: ಅರ್ಧ ಗಂಟೆ ಸಾರಿಗೆ ಅಡಚಣೆ
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್ ಸರ್ವೀಸ್ ರಸ್ತೆಯಲ್ಲಿ ನಿನ್ನೆ ಪಿಕಪ್ ವ್ಯಾನ್ ಕೆಟ್ಟುಹೋದುದರ ಪರಿಣಾಮ ಅರ್ಧ ಗಂಟೆಗಿಂತ ಹೆಚ್ಚು ಕಾಲ ವಾಹನ ಸಂಚಾರಕ್ಕೆ ಅಡಚಣೆಯುಂ ಟಾಯಿತು. ಆಂಬುಲೆನ್ಸ್‌ಗಳ ಸಹಿತ ಇತರ ಎಲ್ಲಾ ವಾಹನಗಳು, ಪಾದಚಾರಿಗಳ ಸಂಚಾರಕ್ಕೆ ಅಡಚಣೆ ಎದುರಾಯಿತು. ಕೊನೆಗೆ ಗುತ್ತಿಗೆದಾರರು ಮಣ್ಣು ತೆಗೆಯುವ ಯಂತ್ರ ಸಹಿತ ತಲುಪಿ ಪಿಕಪ್ ವ್ಯಾನ್‌ನ್ನು ಸರ್ವೀಸ್ ರಸ್ತೆಯಿಂದ ತೆರವುಗೊಳಿಸಿದ್ದು, ಅನಂತರವೇ ವಾಹನ ಸಂಚಾರ ಪುನರಾರಂಭಿಸ ಲಾಯಿತು. ಸರ್ವಿಸ್ ರಸ್ತೆಯ ಹಲವೆಡೆ ಒಂದು ವಾಹನಕ್ಕೆ ಮಾತ್ರವೇ ಕಷ್ಟಪಟ್ಟು ಸಂಚರಿಸಬಹು ದಾದ ಸ್ಥಿತಿಯಿದೆ. ಈ ರಸ್ತೆ ವನ್‌ವೇ ಆಗಿದ್ದರೂ ಕೆಲವು ವಾಹನಗಳನ್ನು ಎರಡೂ ಭಾಗಕ್ಕೆ ಇದೇ ರಸ್ತೆಯಲ್ಲಿ ಸಂಚರಿಸುತ್ತಿ ರುವುದು ನಿತ್ಯ ಕಂಡುಬರುತ್ತಿದೆ. ಇದು ಸಾರಿಗೆ ಅಡಚಣೆ ಹಾಗೂ ವಾಹನ ಅಪಘಾತಗಳಿಗೆ ಕಾರಣವಾಗುತ್ತಿದೆ. ವನ್‌ವೇ ರಸ್ತೆಯಲ್ಲಿ ಎರಡೂ ಭಾಗಕ್ಕೂ ವಾಹನಗಳು ಸಂಚರಿಸುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಅವರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ತೆರೆಯುವು ದರೊಂದಿಗೆ ಇದು ಸರ್ವೀಸ್ ರಸ್ತೆಯಲ್ಲಿ ಸಂಚಾರ ಸಮಸ್ಯೆಗೆ ಕಾರಣವಾಗಲಿದೆಯೆಂಬ ಆತಂಕ ಉಂಟಾಗಿದೆ. ಈಬಗ್ಗೆ ಈಗಾಗಲೇ ನಾಗರಿಕರು ದೂರುಗಳನ್ನು ನೀಡಿದ್ದರೂ ಸಂಬಂಧಪಟ್ಟವರು ಗಮನ ಹರಿಸುತ್ತಿ ಲ್ಲವೆಂದು ನಾಗರಿಕರು ತಿಳಿಸುತ್ತಿದ್ದಾರೆ.