ಕುರುಡಪದವು ಶಾಲೆಯಲ್ಲಿ ಹಾವಿನ ಬಗ್ಗೆ ಶಿಬಿರ
ಪೈವಳಿಕೆ: ಕುರುಡಪದವು ಕೆ.ವಿ.ಎಸ್.ಎಂ.ಎಚ್.ಎಸ್‌ನಲ್ಲಿ ಹಾವುಗಳು, ವಿಧಗಳು, ಸಂರಕ್ಷಣೆ, ಹಾವು ಕಡಿತಕ್ಕೊಳಗಾದಾಗ ತೆಗೆದುಕೊಳ್ಳಬೇಕಾದ ತೀರ್ಮಾನಗಳು, ವಹಿಸಬೇಕಾದ ಮುನ್ನೆಚ್ಚರಿಕೆಗಳು ಇವುಗಳ ಬಗ್ಗೆ ಉರಗ ಸಂರಕ್ಷಕ, ಅಧ್ಯಾಪಕ ಹಾಗೂ ಪಕ್ಷಿ ವೀಕ್ಷಕರಾದ ರಾಜು ಕಿದೂರ್ ಮತ್ತು ವಿಜಯ್ ತರಗತಿಯನ್ನು ನಡೆಸಿಕೊಟ್ಟರು. ಶಾಲಾ ಎಚ್.ಎಂ ಗಾಯತ್ರಿ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಶಾಲಾ ಎನ್.ಜಿ.ಸಿ-ಇಸಿಒ ಕ್ಲಬ್ ಕನ್ವೀನರ್ ಸುಪ್ರಿಯ ಟೀಚರ್ ಸ್ವಾಗತಿಸಿದರು. ವಿದ್ಯಾರ್ಥಿನಿ ಸಹದಿಯ ವಂದಿಸಿದಳು.