ಯುವ ವ್ಯಾಪಾರಿ ಹೃದಯಾಘಾತದಿಂದ ನಿಧನ

ಉಪ್ಪಳ: ಉಪ್ಪಳ ಪೇಟೆಯಲ್ಲಿ ವ್ಯಾಪಾರ ಸಂಸ್ಥೆಗಳನ್ನು ಹೊಂದಿದ್ದ ಯುವ ವ್ಯಾಪಾರಿ ಟರ್ಫ್ ಗ್ರೌಂಡ್ ನಲ್ಲಿ  ಹೃದಯಾ ಘಾತದಿಂದ ಕುಸಿದು ಬಿದ್ದು ನಿಧನರಾದರು. ಹಿದಾಯತ್ ನಗರ ನಿವಾಸಿ ಅಹಮ್ಮದ್ ನಜೀರ್ (34) ನಿಧನರಾದವರು. ನಿನ್ನೆ ರಾತ್ರಿ ಸೋಂಕಾಲ್‌ನಲ್ಲಿ ಶಟ್ಲ್ ಆಟವಾಡಿ ವಿಶ್ರಾಂತಿ ತೆಗೆಯುತ್ತಿದ್ದ ಮಧ್ಯೆ ಹೃದಯಾಘಾತವುಂಟಾಗಿದ್ದು, ಕೂಡಲೇ ಉಪ್ಪಳ, ಮಂಗಳೂರಿನ ಆಸ್ಪತ್ರೆಗೆ ಕೊಂಡುಹೋಗಲಾ ಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತರು ದಿ| ಹಸೈನಾರ್- ಬೀಫಾತಿಮ ದಂಪತಿ ಯ ಪುತ್ರನಾಗಿದ್ದು, ಪತ್ನಿ ಫದಿಲ, ಪುತ್ರಿ ಫಾತಿಮತ್ ಇಶಾ (8 ತಿಂಗಳು), ಸಹೋದರ- ಸಹೋದರಿಯರಾದ ನಿಯಾಝ್, ನಸೀಮ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page