ಗೃಹಿಣಿ ಬಾವಿಗೆ ಬಿದ್ದು ಮೃತ್ಯು
ಕಾಸರಗೋಡು: ಗೃಹಿಣಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ಅಣಂಗೂರು ನೆಲ್ಕಳ ನಿವಾಸಿಯೂ, ಪ್ರಸ್ತುತ ಮನ್ನಿಪ್ಪಾಡಿ ವಿವೇಕಾನಂದ ನಗರದಲ್ಲಿ ವಾಸಿಸುವ ಅಣಂಗೂರು ಜಿಎಲ್ಪಿಎಸ್ನ ನಿವೃತ್ತ ಮುಖ್ಯೋಪಾಧ್ಯಾಯ ಕುಂಞಿಕೃಷ್ಣ ಮಾಸ್ತರ್ರ ಪತ್ನಿ ಚಂದ್ರಾವತಿ(62) ಮೃತಪಟ್ಟ ದುರ್ದೈವಿ. ಇವರು ಇಂದು ಬೆಳಿಗ್ಗೆ ಮನೆ ಬಳಿಯ ಬಾವಿಗೆ ಬಿದ್ದು ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತರು ಮಕ್ಕಳಾದ ಮಧುಸೂದನನ್, ಶೈಲೇಂದ್ರನ್, ವಾಣಿ, ಸೊಸೆಯಂದಿರಾದ ಅನಿಲ, ಲಲಿತ, ಅಳಿಯ ಬಾಬು, ಸಹೋ ದರ-ಸಹೋದರಿಯರಾದ ನಾಗೇಶ, ನಾರಾಯಣ, ಆನಂದ, ಮಾಧವ, ಶ್ರೀಧರ, ಸುಗಂಧಿ, ಗೀತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.