ಮದ್ರಸಕ್ಕೆ ಮಕ್ಕಳನ್ನು ಬಿಟ್ಟು ಮರಳುತ್ತಿದ್ದ ಟ್ಯಾಕ್ಸಿ ಚಾಲಕ ನಿಧನ

ಪೆರ್ಲ: ಮದ್ರಸಕ್ಕೆ ಮಕ್ಕಳನ್ನು ತಲುಪಿಸಿ ಹಿಂತಿರುಗುತ್ತಿದ್ದ ಮಧ್ಯೆ ಹೃದಯಾಘಾತ ಉಂಟಾಗಿ ಅಸ್ವಸ್ಥರಾದ ಚಾಲಕ ಆಸ್ಪತ್ರೆಯಲ್ಲಿ ನಿಧನ ಹೊಂ ದಿದರು. ನಿನ್ನೆ ಬೆಳಿಗ್ಗೆ ಪೆರ್ಲ ಟೌನ್ ಮದ್ರಸ ಪರಿಸರದಲ್ಲಿ ಘಟನೆ ನಡೆದಿದೆ. ಉಕ್ಕಿನಡ್ಕದಲ್ಲಿ ವಾಸಿಸುತ್ತಿರುವ ಅನ್ವರ್ (52) ಮೃತಪಟ್ಟವರು. ಪೆರ್ಲ ಪೇಟೆಯಲ್ಲಿ ಟ್ಯಾಕ್ಸಿ ಚಾಲಕರಾಗಿದ್ದಾರೆ. ಮೃತರು ಪತ್ನಿ ಆಯಿಶಾ, ಮಕ್ಕಳಾದ ಅಸೈನಾರ್, ಅಫೀಫಾ ಶೆರಿನ್, ಲಬೀಬ, ಸಹೋದರರಾದ ಸೆಬೀರ್, ರಶೀದ್, ಶೆರೀಫ್, ಸಹೋದರಿ  ಯರಾದ ಹಸೀನಾ ಸೀನತ್, ನಜ್ಮುನ್ನೀಸ, ಸುಬೈದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page