ಕರ್ನಾಟಕದ ಹಾಲಿಗೆ ಹೆಚ್ಚು ಬೆಲೆ ವಸೂಲು: ಅಳತೆ ತೂಕ ಇಲಾಖೆಯಿಂದ ಕೇಸು ದಾಖಲು
ಕಾಸರಗೋಡು: ಜಿಲ್ಲೆಯಲ್ಲಿ ಕರ್ನಾಟಕದಿಂದ ಬರುವ ಹಾಲು ಹಾಗೂ ಹಾಲುತ್ಪನ್ನಗಳಿಗೆ ಹೆಚ್ಚುವರಿ ಬೆಲೆ ವಸೂಲು ಮಾಡುವ ದೂರಿನಂತೆ ಅಳತೆ ತೂಕ ನಿಯಂತ್ರಣ ಇಲಾಖೆ ನಡೆಸಿದ ತಪಾಸಣೆಯಲ್ಲಿ ಆರು ಪ್ರಕರಣಗಳನ್ನು ದಾಖಲಿಸಲಾಗಿದೆ. 26 ಗರಿಷ್ಠ ದರವಾಗಿ ಮುದ್ರಿಸಿರುವ ಹಾಲಿನ ಪ್ಯಾಕೆಟ್‌ಗಳಿಗೆ 28ರಿಂದ 30 ರೂ.ವರೆಗೆ ವಸೂಲು ಮಾಡಿ ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಕೇಸು ದಾಖಲಿಸಲಾಗಿದೆ. ನಂದಿನಿ ಬ್ರಾಂಡ್ ಹಾಲು, ಹಾಲುತ್ಪನ್ನಗಳಿಗೆ ಮಾರಾಟ ಬೆಲೆಗಿಂತ ಹೆಚ್ಚು ಪಡೆಯುವ ವ್ಯಾಪಾರಿಗಳ ವಿರುದ್ಧ ಕೇಸು ದಾಖಲಿಸಲಾಗಿದೆ. ಜಿಲ್ಲೆಯ ಗಡಿ ಪ್ರದೇಶಗಳ ಅಂಗಡಿಗಳು, ನಗರದ ಅಂಗಡಿಗಳಲ್ಲೂ ಈ ರೀತಿಯ ಕಾನೂನು ಉಲ್ಲಂಘನೆ ಪತ್ತೆ ಮಾಡಲಾಗಿದೆ.
ತಪಾಸಣೆಗೆ ಡೆಪ್ಯುಟಿ ಕಂಟ್ರೋಲರ್ ಪಿ. ಶ್ರೀನಿವಾಸರ ನಿರ್ದೇಶ ಪ್ರಕಾರ ಅಸಿಸ್ಟೆಂಟ್ ಕಂಟ್ರೋಲರ್ ಎಂ. ರತೀಶ್, ಇನ್ಸ್‌ಪೆಕ್ಟರ್‌ಗಳಾದ ಕೆ. ಶಶಿಕಲ, ಕೆ.ಎಸ್. ರಮ್ಯ, ಆರ್. ಹರಿಕೃಷ್ಣನ್, ಎಸ್. ವಿದ್ಯಾಧರನ್ ನೇತೃತ್ವ ನೀಡಿದರು. ಪಿ. ಶ್ರೀಜಿತ್, ಎ.ಕೆ. ಸೌಮ್ಯ, ಎ. ವಿನಯನ್, ಶಾಜಿ ಕುರುಕ್ಕಲ್, ಪಿ. ಅಜಿತ್ ಕುಮಾರ್, ಕೆ. ಸೀತು ತಂಡದಲ್ಲಿದ್ದರು.