ನಿಫಾ ವೈರಸ್‌ನಿಂದ ಬಾಲಕ ಸಾವನ್ನಪ್ಪಿದ ಪ್ರಕರಣ: ರಾಜ್ಯದಲ್ಲಿ ಅಲರ್ಟ್ ಘೋಷಣೆ ; 101 ಮಂದಿ  ಹೈ ರಿಸ್ಕ್ ಪಟ್ಟಿಯಲ್ಲಿ

ತಿರುವನಂತಪುರ:  ತಿರುವನಂತಪುರ ಜಿಲ್ಲೆಯ 14ರ ಹರಯದ ಬಾಲಕ  ಮಾರಣಾಂತಿಕ ನಿಫಾ ವೈರಸ್ ತಗಲಿ ಮೃತಪಟ್ಟ ಬೆನ್ನಲ್ಲೇ  ರಾಜ್ಯದಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಘೋಷಿಸಿದೆ.

 ಅಸೌಖ್ಯಕ್ಕೊಳಗಾಗಿ ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ಬಾಲಕನ  ಆರೋಗ್ಯ ಸ್ಥಿತಿ ಬಳಿಕ ಗಂಭೀರಾವಸ್ಥೆಗೆ ತಲುಪಿದ ಬೆನ್ನಲ್ಲೇ ಆತ ನಿನ್ನೆ ಸಾವನ್ನಪ್ಪಿದ್ದಾನೆ. ಈ ಬಾಲಕನಲ್ಲಿ ನಿಫಾ ಸೋಂಕು ಖಚಿತಪಡಿಸಲಾಗಿತ್ತು. ಬಾಲಕನಿಗೆ ಸೋಂಕು ಖಾತರಿಪಟ್ಟ ಬೆನ್ನಲ್ಲೇ ಆರೋಗ್ಯ ಸಚಿವೆ ವೀಣಾ ಜೋರ್ಜ್ ತುರ್ತಾಗಿ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ಕರೆದು   ನಿಫಾ ವೈರಸ್ ಇನ್ನಷ್ಟು ಪ್ರದೇಶಗಳಿಗೆ ಪಸರಿಸದಂತೆ ಅಗತ್ಯದ ತುರ್ತು ಕ್ರಮ ಕೈಗೊಳ್ಳುವ ನಿರ್ದೇಶ ನೀಡಿದ್ದಾರೆ.

ನಿಫಾ ವೈರಸ್ ಹರಡದಂತೆ  ಜನರು ಮಾಸ್ಕ್ ಧರಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿ ಗಳು ಸಲಹೆ ನೀಡಿದ್ದಾರೆ. ನಿಫಾ ವೈರಸ್ ಬಾವಲಿಗಳಿಂದ ಹರಡುತ್ತಿದ್ದ್ದು   ಅದರ ವಿರುದ್ಧ ಆರೋಗ್ಯ ಇಲಾಖೆ ಅಗತ್ಯ ಕ್ರಮ ಆರಂಭಿಸಿದೆ.

2018, 2019, 2021 ಹಾಗೂ 2023ರಲ್ಲ್ಲೂ  ನಿಫಾ ವೈರಸ್ ಪ್ರಕರಣ ಪತ್ತೆಯಾಗಿತ್ತು.  ಅದರ ಬೆನ್ನಲ್ಲೇ ಮಲಪ್ಪುರಂ ಜಿಲ್ಲೆಯ ಪಾಂಡಿಕ್ಕಾಡ್‌ನಲ್ಲಿ ೧೪ರ ಬಾಲಕನಲ್ಲಿ ನಿಫಾ ವೈರಸ್ ಪತ್ತೆಯಾಗಿ ಅದು ಆತನನ್ನು ಬಲಿತೆಗೆದುಕೊಂಡಿದೆ. ಇದರಿಂದಾಗಿ ಮಲಪ್ಪುರಂ ಜಿಲ್ಲೆಯಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ. ಈ ಬಾಲಕನ ಮನೆಯವರ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಅವರಲ್ಲಿ ರೋಗ ಲಕ್ಷಣ ಪತ್ತೆಯಾಗಿಲ್ಲವೆಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ಮಲಪ್ಪುರಂ  ಮಾತ್ರವಲ್ಲ ತಿರುವನಂತಪುರ, ಪಾಲ್ಘಾಟ್  ಜಿಲ್ಲೆಗಳಲ್ಲಿ 340 ಮಂದಿಯ ಸಂಪರ್ಕ ಪಟ್ಟಿ ತಯಾರಿಸಲಾಗಿದೆ. ಇದರಲ್ಲಿ 101 ಮಂದಿಯನ್ನು ಹೈ ರಿಸ್ಕ್ ಪಟ್ಟಿಯಲ್ಲಿ ಒಳಪಡಿಸಲಾಗಿದೆಯೆಂದೂ ಸಚಿವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page