ಮಂಜೇಶ್ವರ ತಾಲೂಕು ಕಚೇರಿ ಸ್ಥಳಾಂತರಕ್ಕೆ ವಿಳಂಬ ನೀತಿ: ಎನ್ಸಿಪಿ ಆಂದೋಲನಕ್ಕೆ
ಉಪ್ಪಳ: ಬಾಡಿಗೆ ಕಟ್ಟಡದಲ್ಲಿ ಕಾರ್ಯಾ ಚರಿಸುತ್ತಿರುವ ಮಂಜೇಶ್ವರ ತಾಲೂಕು ಸಪ್ಲೈ ಕಚೇರಿ ಯನ್ನು ನಯಾಬಜಾರ್ ನಲ್ಲಿರುವ ಪಂಚಾಯತ್ ನೀಡಿದ ಕಟ್ಟಡಕ್ಕೆ ಸ್ಥಳಾಂತ ರಿಸಬೇಕೆಂದು ಎನ್ಸಿಪಿ ಮಂಜೇಶ್ವರ ಬ್ಲೋಕ್ ಸಮಿತಿ ಆಗ್ರಹಿಸಿದೆ. ಈ ಬಗ್ಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಿಗೆ ಪಕ್ಷ ಮನವಿ ನೀಡಿದೆ.
ಪ್ರಸ್ತುತ ಬಂದ್ಯೋಡು ಮಳ್ಳಂಗೈ ಯಲ್ಲಿರುವ ಬಾಡಿಗೆ ಕಟ್ಟಡದಲ್ಲಿ ಕಚೇರಿ ಕಾರ್ಯಾಚರಿಸುತ್ತಿದೆ. ಇದನ್ನು ಇಲ್ಲಿಂದ ಮಂಗಲ್ಪಾಡಿ ಪಂಚಾ ಯತ್ ನೀಡಿದ ನಯಾ ಬಜಾರ್ನ ಕಟ್ಟಡಕ್ಕೆ ಸ್ಥಳಾಂತ ರಿಸಲು ಕಳೆದ ೫ ವರ್ಷದಿಂದ ಬೇಡಿಕೆ ಇಡಲಾಗಿದೆ. ಜನರು ರೋಷಗೊಂಡ ಹಿನ್ನೆಲೆಯಲ್ಲಿ ಮಂಗಲ್ಪಾಡಿ ಪಂಚಾಯತ್ನಲ್ಲಿ ಮುಚ್ಚುಗಡೆಗೊಂಡಿದ್ದ ಲೈಬ್ರೆರಿ ಕಟ್ಟಡವನ್ನು ದುರಸ್ತಿಗೊಳಿಸಿ ಸಪ್ಲೈ ಕಚೇರಿಗಾಗಿ ನೀಡಲಾಗಿತ್ತು. 1740 ಚದರ ಅಡಿ ವಿಸ್ತೀರ್ಣವಿರುವ ಈ ದೊಡ್ಡ ಕಟ್ಟಡ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಇದ್ದು ಸಾರ್ವಜನಿಕರಿಗೆ ಬಹಳಷ್ಟು ಉಪಯುಕ್ತವಾಗಲಿದೆ.
ಹೀಗಿದ್ದರೂ ಕೆಲವು ಸ್ಥಾಪಿತ ಹಿತಾಸಕ್ತಿಗಳ ಒತ್ತಾಸೆಗೆ ಮಣಿದು ಸಪ್ಲೈ ಕಚೇರಿಯನ್ನು ಸ್ಥಳಾಂತರಿಸು ವುದಕ್ಕೆ ವಿಳಂಬ ನೀತಿ ಅನುಸರಿಸಲಾ ಗುತ್ತಿದೆಯೆಂದು ಎನ್ಸಿಪಿ ದೂರಿದೆ. ಇನ್ನೂ ಸ್ಥಳಾಂತರಗೊಳ್ಳಲು ವಿಳಂಬ ಮಾಡಿದರೆ ಎನ್ಸಿಪಿ ನೇತೃತ್ವದಲ್ಲಿ ಜನಪರ ಆಂದೋಲನಕ್ಕೆ ಮುಂದಾಗುವುದಾಗಿ ಪಕ್ಷದ ಬ್ಲೋಕ್ ಸಮಿತಿ ಅಧ್ಯಕ್ಷ ಮೊಹಮ್ಮದ್ ಕೈಕಂಬ ಮುನ್ನೆಚ್ಚರಿಕೆ ನೀಡಿದ್ದಾರೆ.