ಗಾಳಿ, ಮಳೆ: ಮನೆಗೆ ಹಾನಿ

ಕುಂಬಳೆ: ಧಾರಾಕಾರ ಮಳೆಯ ಜೊತೆಗೆ ನಿನ್ನೆ ಸಂಜೆ ಬೀಸಿದ ಭಾರೀ ಗಾಳಿಯಿಂದಾಗಿ  ಮನೆಯೊಂದು ಹಾನಿಗೀಡಾಗಿದೆ. ಕುಂಬಳೆ ಬದ್ರಿಯಾ ನಗರ ನಡುಕುನ್ನುವಿನ ಇಬ್ರಾಹಿಂ ವಳವಿಲ್ ಎಂಬವರ ಹೆಂಚುಹಾಸಿದ ಮನೆ ಹಾನಿಗೀಡಾಗಿದೆ.  ಮನೆಯ ಛಾವಣಿ ಕುಸಿದಿದೆ. ಘಟನೆ ವೇಳೆ ಇಬ್ರಾಹಿಂ ವಳವಿಲ್‌ರ ಪತ್ನಿ ಹಾಗೂ ಮಗು ಮನೆಯಲ್ಲಿದ್ದರು. ಅವರು ಹೊರಗೆ ಓಡಿದುದರಿಂದ ಅಪಾ ಯದಿಂದ ಪಾರಾಗಿದ್ದಾರೆ.  ವಿಷಯ ತಿಳಿದು ತಲುಪಿದ ನಾಗರಿಕರು ಹಾಗೂ ಪಂಚಾಯತ್ ಅಧಿಕಾರಿಗಳು ಮನೆಗೆ  ಪ್ಲಾಸ್ಟಿಕ್ ಹೊದಿಸಿ ತಾತ್ಕಾಲಿಕವಾಗಿ ವಾಸ ಸೌಕರ್ಯ ಏರ್ಪಡಿಸಿದ್ದಾರೆ.

RELATED NEWS

You cannot copy contents of this page